ADVERTISEMENT

ಆಧುನಿಕ ರೊಬೊಟಿಕ್ ತಂತ್ರಜ್ಞಾನದ ಮೂಲಕ ಯಶಸ್ವಿ ಗರ್ಭಕೋಶ ಶಸ್ತ್ರಚಿಕಿತ್ಸೆ

ಪಿಟಿಐ
Published 10 ಆಗಸ್ಟ್ 2021, 11:18 IST
Last Updated 10 ಆಗಸ್ಟ್ 2021, 11:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮುಟ್ಟಿನ ತೀವ್ರ ರಕ್ತಸ್ರಾವ ಮತ್ತು ತೀವ್ರ ಜಠರದ ನೋವಿನಿಂದ ಬಳಲುತ್ತಿದ್ದ 47 ವರ್ಷದ ಮಹಿಳೆಯೊಬ್ಬರಿಗೆ ಅತ್ಯಾಧುನಿಕ ರೊಬೊಟಿಕ್‌ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಉತ್ತರ ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ರೊಬೊಟಿಕ್‌ ಆಧುನಿಕ ತಂತ್ರಜ್ಞಾನದ ಮೂಲಕ ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪಿಎಸ್‌ಆರ್‌ಐ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಹುಲ್ ಮಂಚಂಡ, ‘ರೋಗಿಗೆ ಹಿಮೋಗ್ಲೋಬಿನ್ ಕಡಿಮೆಯಾಗಿತ್ತು. ಸುಮಾರು 10 ಮಿ.ಗ್ರಾಂ/ಡೆಸಿಲೀಟರ್‌ ಇತ್ತು (12 Mg/dl ರಿಂದ 16 mg/dl ಇರಬೇಕು). ಎಂಡೊಮೆಟ್ರಿಯಂನ ಬಯಾಪ್ಸಿಯುವರದಿ ಪ್ರಕಾರ, ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್‌ ಕೂಡ ಇತ್ತು. ಹಾಗಾಗಿ ಗರ್ಭಕೋಶವನ್ನು ತೆಗೆಯುವುದಷ್ಟೇ ನಮ್ಮೆದುರಿಗಿದ್ದ ಆಯ್ಕೆಯಾಗಿತ್ತು‘ ಎಂದು ಹೇಳಿದರು.

ADVERTISEMENT

ನಂತರ, ರೋಗಿಗೆ ಆಪ್ತ ಸಲಹೆ ಮೂಲಕ, ಸುಧಾರಿತ ರೊಬೊಟಿಕ್ ಸರ್ಜರಿ ಮಾಡಿಸಿಕೊಳ್ಳಲು ಸಲಹೆ ನೀಡಲಾಯಿತು. ಈ ವಿಧಾನ, ಹಿಂದಿನ ರೊಬೊಟಿಕ್ ಮತ್ತು ಇತರೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯ ತಂತ್ರಗಳಿಗಿಂತ ತುಂಬಾ ಉಪಯೋಗವಿದೆ ಎಂದು ವಿವರಿಸಲಾಗಿತ್ತು.

ರೋಗಿಯ ಒಪ್ಪಿಗೆಯ ಮೇರೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯಾದ ಇಪ್ಪತ್ನಾಲ್ಕು ಗಂಟೆಗಳಲ್ಲಿ ರೋಗಿಯನ್ನು ಮನೆಗೆ ಕಳುಹಿಸಲಾಯಿತು.

‘ಇದೊಂದು ಸುಧಾರಿತ ರೊಬೊಟಿಕ್ ಶಸ್ತ್ರಚಿಕಿತ್ಸೆಯಾಗಿದೆ. ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆ ಮತ್ತು ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ಇದರಲ್ಲಿ ಬಹಳ ಪ್ರಯೋಜನಗಳಿವೆ‘ ಎಂದು ವೈದ್ಯರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.