Delhi Chalo: ರೈತರ ಹೋರಾಟದ ಕಥೆ ಹೇಳುವ ಚಿತ್ರಗಳು ಇಲ್ಲಿವೆ...
ಪ್ರಜಾವಾಣಿ ವೆಬ್ ಡೆಸ್ಕ್ Published 21 ಫೆಬ್ರುವರಿ 2024, 13:56 IST Last Updated 21 ಫೆಬ್ರುವರಿ 2024, 13:56 IST 'ದೆಹಲಿ ಚಲೋ' ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತ, ಮೀಸೆ ತಿರುವುತ್ತಾ ಕ್ಯಾಮೆರಾಗೆ ಪೋಸು ನೀಡಿದ್ದು ಹೀಗೆ
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತ್ರಿಪಡಿಸುವ ಕಾನೂನು ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಹಿಮ್ಮೆಟ್ಟಿಸಲು ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.
ಹಿಂದೆ ಶೆಲ್ ಸಿಡಿದರೂ ಧೃತಿಗೆಡದೆ ನಿಂತ ಹೋರಾಟಗಾರರು, ತಮನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಪ್ರಸಾದ ಕೊಟ್ಟು ಹಸಿವು ನೀಗಿಸಿದ ಮಹಿಳೆಯರು, ಕಾಲಿಲ್ಲದಿದ್ದರೂ ಪ್ರತಿಭಟನೆಗೆ ಧುಮುಕಿರುವ ಯುವಕರು, ನೆಲವೇ ಹಾಸಿಗೆ–ಆಗಸವೇ ಚಪ್ಪರ ಎಂಬಂತೆ ರಸ್ತೆಯಲ್ಲೇ ಮಲಗಿದ ರೈತರ ಹೋರಾಟದ ಚಿತ್ರಗಳು ಇಲ್ಲಿವೆ. ಪಂಜಾಬ್–ಹರಿಯಾಣ ಗಡಿಯ ಪಟಿಯಾಲ ಜಿಲ್ಲೆಯ ಶಂಭು ಪ್ರದೇಶದಲ್ಲಿ 'ಪಿಟಿಐ' ಸೆರೆಹಿಡಿದ ಈ ಚಿತ್ರಗಳು ಫೆಬ್ರುವರಿ 13ರಂದು ಆರಂಭವಾಗಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯ ಕಥೆ ಹೇಳಬಲ್ಲವು...
ತಡೆಬೇಲಿ ಸರಿಪಡಿಸುತ್ತಿರುವ ಭದ್ರತಾ ಸಿಬ್ಬಂದಿ
ಬಾವುಟ ಸಿಕ್ಕಿಸಿರುವ ಕಡ್ಡಿಗಳನ್ನೇ ಊರುಗೋಲಾಗಿಸಿ ನಡೆದು ಬರುತ್ತಿರುವ ರೈತ ಮಹಿಳೆಯರು
ಒಂದು ಕಾಲಿಲ್ಲದಿದ್ದರೂ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವೃದ್ಧ ರೈತನೊಂದಿಗೆ ಮಿತ್ರರು
ರೈತರ ಹಿಂದೆಯೇ ಸಿಡಿದ ಅಶ್ರುವಾಯು ಶೆಲ್
ಪ್ರತಿಭಟನಾನಿರತ ರೈತರನ್ನು ಹತ್ತಿಕ್ಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೂ, ರೈತ ಮಹಿಳೆಯರು ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಪ್ರಸಾದ (ಲಂಗರ್) ವಿತರಿಸಿ, ಹಸಿವು ನೀಗಿಸಿದರು
ರಸ್ತೆ ಪಕ್ಕದ ಗದ್ದೆಯ ಇಕ್ಕೆಲಗಳಲ್ಲೂ ಭಾರಿ ಭದ್ರತೆ
ತಡೆಯಲು ಕಾಯುತ್ತಾ 'ನಿಂತ' ಪೊಲೀಸರೆದುರು 'ಕುಳಿತ' ಪ್ರತಿಭಟನಾಕಾರ
ರೈತರನ್ನು ಬೆಂಬಲಿಸಿ ಪ್ರತಿಭಟನೆಗೆ ಧುಮುಕಿರುವ ಅಂಗವಿಕಲರು
ತಮ್ಮ ಸಂಘಟನೆಯ ಧ್ವಜ ಹಿಡಿದು ಸೇತುವೆ ಮೇಲೆ ಕುಳಿತ ರೈತರು
ದಾಹ ತೀರಿಸಿಕೊಳ್ಳಲು ಕಬ್ಬು ಅರೆಯುತ್ತಿರುವುದು
ಕಾಲು ನೋವು ನಿವಾರಿಸಿಕೊಳ್ಳಲು ಮುಲಾಮು ಹಚ್ಚಿಸಿಕೊಳ್ಳುತ್ತಿರುವ ರೈತ
ವಾಹನಗಳಲ್ಲೇ ವಿಶ್ರಾಂತಿಗೆ ವ್ಯವಸ್ಥೆ ಮಾಡಿಕೊಂಡಿರುವುದು
ಹಗಲೆಲ್ಲ ಹೋರಾಡಿ, ರಾತ್ರಿ ರಸ್ತೆಗೊರಗಿ ಮಲಗಿದ ರೈತರು
ಚುರುಗುಟ್ಟುವ ಬಿರು ಬಿಸಿಲಿನಲ್ಲಿ ರಸ್ತೆಯಲ್ಲೇ ಮಲಗಿ ವಿಶ್ರಮಿಸಿದ ರೈತ