ADVERTISEMENT

ಬಿಜೆಪಿಯಲ್ಲಿ ಹಿರಿಯರು ಕಿರಿಯರಿಗೆ ಅವಕಾಶ ಕೊಡಬೇಕು: ಪ್ರಧಾನಿ ಮೋದಿ

ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರನ್ನು ಸನ್ಮಾನಿಸಿ ಮನಸಾರೆ ಹೊಗಳಿದ ಪ್ರಧಾನಿ ಮೋದಿ

ಏಜೆನ್ಸೀಸ್
Published 20 ಜನವರಿ 2020, 15:42 IST
Last Updated 20 ಜನವರಿ 2020, 15:42 IST
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸನ್ಮಾನಿಸಿ ಮಾತನಾಡಿದ ಪ್ರಧಾನಿ ಮೋದಿ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸನ್ಮಾನಿಸಿ ಮಾತನಾಡಿದ ಪ್ರಧಾನಿ ಮೋದಿ   

ನವದೆಹಲಿ:ಬಿಜೆಪಿಪಕ್ಷದಲ್ಲಿ ಹಿರಿಯರು ಕಿರಿಯರಿಗೆ ಅವಕಾಶ ಕೊಡಬೇಕು, ಅವರು ಬೆಳೆಯಲು ಸಹಾಯ ಮಾಡಬೇಕುಎಂದು ಪ್ರಧಾನಿ ನರೇಂದ್ರಮೋದಿ ಕಿವಿಮಾತು ಹೇಳಿದ್ದಾರೆ.

ಸೋಮವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜೆ.ಪಿ.ನಡ್ಡಾ ಅವರನ್ನುಸನ್ಮಾನಿಸಿದ ನರೇಂದ್ರಮೋದಿ ಗತಕಾಲದ ತಮ್ಮಿಬ್ಬರ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ಜಗತ್ ಪ್ರಕಾಶ್ ನಡ್ಡಾ ಅವರು ಪಕ್ಷದ ಶಿಸ್ತಿನ ಸಿಪಾಯಿ ಎಂದು ಮನಸಾರೆ ಪ್ರಶಂಸಿಸಿದರು.ಜೆ.ಪಿ.ನಡ್ಡಾ ಅವರು ನನಗೆ ಹಳೆಯ ಸ್ನೇಹಿತ, ನಾನು ಪಕ್ಷದ ಸಂಘಟನೆಯಲ್ಲಿದ್ದಾಗ, ನಡ್ಡಾಯುವಮೋರ್ಚಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಾವಿಬ್ಬರು ಸ್ಕೂಟರ್‌ನಲ್ಲಿ ಓಡಾಡುತ್ತಿದ್ದೆವು.ನನಗೆ ಹಿಮಾಚಲಪ್ರದೇಶದಲ್ಲಿ ಹಲವು ಸಮಯ ಕೆಲಸ ಮಾಡುವ ಅವಕಾಶ ಒದಗಿಬಂತು. ಆಗ ನಡ್ಡಾ ಅವರಂತಹ ಉತ್ತಮ ಸ್ನೇಹಿತ ಸಿಕ್ಕಿದರು. ಬಿಹಾರದಲ್ಲೂ ನೆನಪಿಸಿಕೊಳ್ಳುವಂತಹ ಘಟನೆಯೊಂದು ನಡೆದಿದೆ. ಅಲ್ಲಿ ಎಬಿವಿಪಿಯ ಮುಖಂಡರಾಗಿದ್ದಾಗ ಅಲ್ಲಿನ ಹೋರಾಟದಲ್ಲಿ ಅವರ ಹಲ್ಲು ಕೂಡ ಮುರಿದಿದೆ ಎಂದರು.

ADVERTISEMENT

ಈ ಸಮಯದಲ್ಲಿ ಅಮಿತ್ ಶಾ ಅವರನ್ನು ಹೊಗಳಿದ ಮೋದಿ, ಸರ್ಕಾರದಲ್ಲಿದ್ದುಕೊಂಡು ಪಕ್ಷದ ಜವಾಬ್ದಾರಿ ಹೊತ್ತುಕೊಳ್ಳುವುದು ಕಷ್ಟದ ಕೆಲಸ. ಇಂತಹ ಕಷ್ಟದ ಕೆಲಸವನ್ನೂ ಪಕ್ಷದ ಚುಕ್ಕಾಣಿ ಹಿಡಿದ ಅಮಿತ್ ಶಾ ಅವರು ಸಮರ್ಥವಾಗಿ ನಿಭಾಯಿಸಿ ಪಕ್ಷ ವಿಸ್ತಾರವಾಗಲು ತಳಮಟ್ಟದಲ್ಲಿ ಅಡಿಪಾಯ ಹಾಕಿಕೊಟ್ಟಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದರು.

ಒಂದು ಪಕ್ಷ ಸಮರ್ಥವಾಗಿ ಬೆಳೆಯಬೇೆಕೆಂದರೆ ಪಕ್ಷದ ಕಾರ್ಯಕರ್ತರೂ ಬೆಳೆಯಬೇಕು. ಇದನ್ನು ಬಿಜೆಪಿಯಲ್ಲಿ ಕಾಣಬಹುದು. ಬಿಜೆಪಿ ಪ್ರಜಾಪ್ರಭುತ್ವ ತತ್ವ ಅಳವಡಿಸಿಕೊಂಡಿರುವ ಪಕ್ಷ. ಈ ಸಮಯದಲ್ಲಿ ಪಕ್ಷವನ್ನು ಈ ಮಟ್ಟಕ್ಕೆ ಬೆಳೆಸಿದ ಹಿರಿಯರಿಗೆ ಅಭಿನಂದನೆಸಲ್ಲಿಸುತ್ತೇನೆ. ಪಕ್ಷದ ಹಿರಿಯರು ಕಿರಿಯ ಕಾರ್ಯಕರ್ತರು ಬೆಳೆಯಲು ಸಹಾಯ ಮಾಡಬೇಕು. ಅವರಿಗೆ ಬಲತುಂಬಬೇಕು. ಕಿರಿಯರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರು ಜೆ.ಪಿ.ನಡ್ಡಾ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ಅವರ ಮುಂದಾಳತ್ವ ನಮಗೆ ಹೊಸ ಶಕ್ತಿ ಹಾಗೂ ಸ್ಫೂರ್ತಿಯನ್ನು ತುಂಬಲಿದೆ. ಇದು ಎಲ್ಲಾ ಕಾರ್ಯಕರ್ತರ ಕೆಲಸ, ಅವರು ಏನು ಕೇಳುತ್ತಾರೋ ಅದನ್ನು ನಾವು ಕೊಡಬೇಕು ಎಂದು ಮೋದಿ ಹೇಳಿದ್ದಾರೆ.

ಇದೇ ಸಮಯದಲ್ಲಿ ವಿರೋಧ ಪಕ್ಷಗಳನ್ನು ಕುಟುಕಿದ ಪ್ರಧಾನಿ, ಸಿಎಎಗೆ ವಿರೋಧ ವ್ಯಕ್ತಪಡಿಸುವವರ ಹಿಂದೆ ವಿರೋಧ ಪಕ್ಷಗಳ ಕುತಂತ್ರವಿದೆ ಎಂದು ಆರೋಪಿಸಿದರು. ಅಲ್ಲದೆ, ಇದರ ಕುರಿತು ಕೇವಲ ಸುಳ್ಳುಗಳು, ವದಂತಿಗಳನ್ನು ಹರಡುತ್ತಿದ್ದೀರಿ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.