ADVERTISEMENT

ಎಎಪಿ ಸಚಿವರ ಮನೆ, ಕಚೇರಿಯಲ್ಲಿ ಮುಂದುವರಿದ ಐಟಿ ಶೋಧ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 11:37 IST
Last Updated 12 ಅಕ್ಟೋಬರ್ 2018, 11:37 IST
   

ನವದೆಹಲಿ: ತೆರಿಗೆ ವಂಚನೆ ಪ್ರಕರಣ ಸಂಬಂಧ ದೆಹಲಿ ಸಾರಿಗೆ ಸಚಿವ ಹಾಗೂಆಮ್‌ ಆದ್ಮಿ ಪಕ್ಷದ ಮುಖಂಡ ಕೈಲಾಶ್‌ ಗೆಹ್ಲೋಟ್‌ ಅವರ ಮನೆ ಹಾಗೂ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯ ಶುಕ್ರವಾರವೂ ಮುಂದುವರಿದಿದೆ.

ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದಎಎಪಿ ಶಾಸಕ ನಿತಿನ್‌ ತ್ಯಾಗಿ, ‘48 ಗಂಟೆಗಳ ಹುಡುಕಾಟದ ಬಳಿಕವೂ ಯಾವುದೇ ಅಕ್ರಮದ ದಾಖಲೆ ಪತ್ತೆ ಹಚ್ಚಲು ಐಟಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ’ ಎಂದಿದ್ದಾರೆ.

ಗೆಹ್ಲೋಟ್‌ ಅವರ ನಿವಾಸ, ಕಚೇರಿ, ಕಂಪೆನಿಗಳು ಸೇರಿ ಒಟ್ಟು 16 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಬುಧವಾರವೇ ಶೋಧ ಆರಂಭಿಸಿದ್ದರು. ಲೆಕ್ಕಪತ್ರವಿಲ್ಲದ ₹ 35 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆಎಂದು ಕೆಲವು ವರದಿಗಳಲ್ಲಿ ಪ್ರಕಟವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.