ADVERTISEMENT

ಎಚ್‌3ಎನ್2 –ಮುನ್ನೆಚ್ಚರಿಕೆ ಹೆಚ್ಚಿಸಿ, ಭಯ ಬೇಡ: ತಜ್ಞರು 

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 16:37 IST
Last Updated 11 ಮಾರ್ಚ್ 2023, 16:37 IST
   

ನವದೆಹಲಿ: ಎಚ್‌3ಎನ್‌2 ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮಗಳ ಅವಶ್ಯಕತೆಯಿದ್ದು, ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಈ ಸೋಂಕಿಗೆ ದೇಶದಲ್ಲಿ ಶುಕ್ರವಾರ ಇಬ್ಬರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಜನವರಿ 2 ರಿಂದ ಮಾರ್ಚ್ 5 ರವರೆಗೆ ದೇಶದಲ್ಲಿ 451 ಎಚ್ 3 ಎನ್ 2 ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ADVERTISEMENT

ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಸಂಸ್ಥೆ (ಸಿಡಿಸಿ) ಪ್ರಕಾರ, ಎಚ್ 3 ಎನ್ 2 ಸಾಮಾನ್ಯವಾಗಿ ಹಂದಿಗಳಲ್ಲಿ ಹರಡುತ್ತದೆ ಮತ್ತು ಮನುಷ್ಯರಿಗೆ ಸೋಂಕು ತಗುಲುತ್ತದೆ. ಕೆಮ್ಮು, ಜ್ವರ, ನೋವು, ವಾಕರಿಕೆ, ವಾಂತಿ ಅಥವಾ ಅತಿಸಾರ ರೋಗಲಕ್ಷಣಗಳಿವೆ. ಇದು ಋತುಮಾನಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುವ ಇನ್‌ಫ್ಲುಯೆಂಜಾ ಸೋಂಕು.

ಕೇವಲ 5 ಪ್ರತಿಶತ ಪ್ರಕರಣಗಳು ಮಾತ್ರ ಆಸ್ಪತ್ರೆಗೆ ದಾಖಲಾಗಿವೆ‌. ಭಯಪಡುವ ಅಗತ್ಯವಿಲ್ಲವಾದರೂ, ಕೋವಿಡ್ ಸಮಯದಲ್ಲಿ ತೆಗೆದುಕೊಂಡಂತೆಯೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ಅಪೊಲೊ ಆಸ್ಪತ್ರೆಯ ಇಂಟರಲ್‌ ಮೆಡಿಸಿನ್‌ ಹಿರಿಯ ಸಲಹೆಗಾರ ತರುಣ್ ಸಹಾನಿ ಹೇಳಿದರು.

‘ಕೋವಿಡ್‌ ನಂತೆ ಮತ್ತೊಂದು ಅಲೆ ನೋಡುವ ನಿರೀಕ್ಷೆಯಿಲ್ಲ’ ಎಂದು ಶ್ವಾಸಕೋಶಶಾಸ್ತ್ರಜ್ಞ ಅನುರಾಗ್ ಅಗರವಾಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.