ಪಟಿಯಾಲ (ಪಂಜಾಬ್): ಐಸಿಸಿ ಟಿ–20 ವಿಶ್ವಕಪ್ ಕೂಟದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಸೆಮಿ ಫೈನಲ್ ಪಂದ್ಯ ವೀಕ್ಷಣೆಗೆ ಪಟಿಯಾಲ ಜಿಲ್ಲೆಯ ವಕೀಲರು ನ್ಯಾಯಾಲಯದ ಕಲಾಪಕ್ಕೆ ರಜೆ ಹಾಕಿದ್ದಾರೆ.
ಗುರುವಾರ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯ ಇತ್ತು. ಹೀಗಾಗಿ ಪಟಿಯಾಲ ಜಿಲ್ಲಾ ಬಾರ್ ಅಸೋಶಿಯೇಷನ್‌ನ ವಕೀಲರು, ಮಧ್ಯಾಹ್ನದ ಬಳಿಕ ನ್ಯಾಯಾಲಯದ ಕಲಾಪಗಳಿಗೆ ರಜೆ ಹಾಕಿದ್ದಾರೆ.
ಭಾರತ–ಇಂಗ್ಲೆಂಡ್ ಪಂದ್ಯ ಸಲುವಾಗಿ ಭೋಜನ ವಿರಾಮದ ಬಳಿಕ ಕೋರ್ಟ್ ಕಲಾಪಗಳಿಗೆ ರಜೆ ಹಾಕಿದ್ದಾಗಿ ಜಿಲ್ಲಾ ಬಾರ್ ಅಸೋಶಿಯೇಷನ್‌ನ ಉಪಾಧ್ಯಕ್ಷ ಕುಲ್‌ಜಿತ್ ಸಿಂಗ್ ಧಲಿವಾಲ್ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ
‘ಬಾರ್ ಎಸೋಶಿಯೇಷನ್ ಅಧ್ಯಕ್ಷ ಜಿತೇಂದ್ರ ಪಾಲ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ, ಭಾರತ ಹಾಗೂ ಇಂಗ್ಲೆಂಡ್ ನಡುವಣ ಸೆಮಿಫೈನಲ್ ನಿಮಿತ್ತ ಇಂದು ಮಧ್ಯಾಹ್ನದ ಬಳಿಕದ ಕೋರ್ಟ್ ಕಲಾಪಗಳಿಗೆ ರಜೆ ಹಾಕಲು ತೀರ್ಮಾನ ಮಾಡಲಾಗಿದೆ‘ ಎಂದು ಬಾರ್ ಅಸೋಶಿಯೇಷನ್ ಹೇಳಿದೆ.
ಅಲ್ಲದೇ ಗುರುವಾರ ಮಧ್ಯಾಹ್ನ ಇದ್ದ ಪ್ರಕರಣಗಳ ವಿಚಾರಣೆಯನ್ನು ಮುಂದೆ ಯಾವುದಾದರೊಂದು ದಿನಾಂಕಕ್ಕೆ ವರ್ಗಾಯಿಸಿ ಎಂದು ನ್ಯಾಯಾಲಯವನ್ನು ವಕೀಲರ ಪರಿಷತ್ತು ಕೋರಿಕೊಂಡಿದೆ.
ದುರದೃಷ್ಠವಶಾತ್ ಈ ಪಂದ್ಯವನ್ನು ಭಾರತ 10 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.