ವಿಶ್ವಸಂಸ್ಥೆ: ಪ್ಯಾಲೆಸ್ಟೀನ್‌ನ ಕೆಲ ಪ್ರದೇಶಗಳನ್ನು ಇಸ್ರೇಲ್ ದೀರ್ಘಕಾಲದಿಂದ ಅತಿಕ್ರಮಣ ಮಾಡಿಕೊಂಡಿದ್ದು, ಇದರಿಂದ ಆಗಬಹುದಾದ ಕಾನೂನಾತ್ಮಕ ಪರಿಣಾಮಗಳ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಮತದಾನದಿಂದ ಭಾರತ ದೂರ ಉಳಿದಿದೆ.
‘ಪೂರ್ವ ಜೆರುಸಲೇಮ್ ಸೇರಿದಂತೆ ಪ್ಯಾಲೆಸ್ಟೀನ್‌ನ ಕೆಲ ಪ್ರದೇಶಗಳನ್ನು ಇಸ್ರೇಲ್ ಅತಿಕ್ರಮಣ ಮಾಡಿರುವುದರಿಂದ, ಪ್ಯಾಲೆಸ್ಟೀನ್ ಜನರ ಮಾನವ ಹಕ್ಕುಗಳನ್ನು ಉಲ್ಲಂಘನೆಯಾಗುತ್ತಿದೆ’ ಎಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಮತಕ್ಕೆ ಹಾಕಲಾಗಿತ್ತು. 87 ದೇಶಗಳು ನಿರ್ಣಯದ ಪರವಾಗಿ ಮತ್ತು 26 ದೇಶಗಳು ನಿರ್ಣಯ ವಿರೋಧಿಸಿ ಮತ ಚಲಾಯಿಸಿದವು. ಭಾರತ,ಬ್ರೆಜಿಲ್, ಜಪಾನ್, ಮ್ಯಾನ್ಮಾರ್, ಫ್ರಾನ್ಸ್ ಸೇರಿದಂತೆ 53 ದೇಶಗಳು ತಟಸ್ಥವಾಗಿದ್ದವು.
ನಂತರ, ಅತಿಕ್ರಮಣದಿಂದ ಉದ್ಭವಿಸುವ ಕಾನೂನಾತ್ಮಕ ಪರಿಣಾಮಗಳೇನು ಎಂಬ ಬಗ್ಗೆ ಅಂತರರಾಷ್ಟ್ರೀಯ ನ್ಯಾಯಾಲಯದ ಅಭಿಪ್ರಾಯ ಕೇಳಲುವಿಶ್ವಸಂಸ್ಥೆಯು ನಿರ್ಧರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.