ADVERTISEMENT

ಲಿಂಗಸಮಾನತೆಗೆ ಸಾಮಾಜಿಕ ಕಟ್ಟುಪಾಡುಗಳೇ ಅಡ್ಡಿ: UN ಮಹಿಳಾ ಅಧಿಕಾರಿಗಳ ಅಭಿಮತ

ಪಿಟಿಐ
Published 27 ಅಕ್ಟೋಬರ್ 2024, 14:31 IST
Last Updated 27 ಅಕ್ಟೋಬರ್ 2024, 14:31 IST
.
.   

ನವದೆಹಲಿ: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಲಿಂಗ ಸಮಾನತೆ ವಿಚಾರದಲ್ಲಿ ಗಮನಾರ್ಹ ಪ್ರಗತಿಯಾಗುತ್ತಿದೆ. ತಳಮಟ್ಟದಲ್ಲಿ ಬಂಡವಾಳ ಹೂಡಿಕೆ ಮತ್ತು ಮಹಿಳಾ ನಾಯಕತ್ವದ ಪ್ರಮಾಣ ಹೆಚ್ಚುತ್ತಿದೆ. ಆದರೆ, ಸಾಮಾಜಿಕ ಕಟ್ಟು‍ಪಾಡುಗಳು, ಸುರಕ್ಷತೆ ವಿಚಾರಗಳು ಪೂರ್ಣ ಪ್ರಮಾಣದ ಲಿಂಗಸಮಾನತೆ ಸಾಧಿಸಲು ಅಡ್ಡಿಯಾಗಿವೆ ಎಂದು ವಿಶ್ವಸಂಸ್ಥೆಯ ಮಹಿಳಾ ಅಧಿಕಾರಿಗಳು ಹೇಳಿದ್ದಾರೆ.

ವಿಶ್ವಸಂಸ್ಥೆಯ ಕಾರ್ಯತಂತ್ರ ಪಾಲುದಾರಿಕೆ ನಿರ್ದೇಶಕಿ ಡೇನಿಯಲ್‌ ಸೀಮರ್‌ ಮತ್ತು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸುಸನ್‌ ಜೇನ್ ಫರ್ಗ್ಯೂಸನ್‌ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ಲಿಂಗಸಮಾನತೆ ವಿಚಾರದಲ್ಲಿ ಭಾರತದ ದಾಪುಗಾಲು ಮತ್ತು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು.

ಮಹಿಳಾ ಸಬಲೀಕರಣ ಮತ್ತು ಲಿಂಗ–ಪ್ರತಿಕ್ರಿಯಾತ್ಮಕ ನೀತಿಗಳಲ್ಲಿ ಭಾರತದ ಹೂಡಿಕೆ ಪ್ರಮಾಣವು ಹೆಚ್ಚುತ್ತಿದೆ. ಆದರೆ, ಆಳವಾಗಿ ಬೇರೂರಿರುವ ಸಾಮಾಜಿಕ ಕಟ್ಟುಪಾಡುಗಳು, ಮಿತ ಆರ್ಥಿಕತೆಯು ಪೂರ್ಣ ಪ್ರಮಾಣದ ಪ್ರಗತಿಗೆ ಅಡ್ಡಿಯಾಗಿವೆ ಎಂದು ಹೇಳಿದರು.

ADVERTISEMENT

‘ಈ ನಿಟ್ಟಿನಲ್ಲಿ ಪೂರ್ಣ ಪ್ರಗತಿ ಸಾಧಿಸಲು ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳ ಗುರಿ ನಿರ್ದೇಶಿತ ಪ್ರಯತ್ನದ ಅಗತ್ಯವಿದೆ’ ಎಂದು ಫರ್ಗ್ಯೂಸನ್‌ ಹೇಳಿದರು.

ಭಾರತದಲ್ಲಿ ಲಿಂಗ–ಪ್ರತಿಕ್ರಿಯಾತ್ಮಕ ಬಜೆಟ್‌ಗಾಗಿ ಮೀಸಲಿಡುವ ಅನುದಾನದ ಪ್ರಮಾಣವು ಶೇ 6.8ಕ್ಕೆ ಹೆಚ್ಚಳವಾಗಿದೆ. ಆರೋಗ್ಯ, ಶಿಕ್ಷಣ, ಆರ್ಥಿಕ ಅವಕಾಶಗಳಲ್ಲಿನ ಅಂತರವನ್ನು ತಗ್ಗಿಸಲು ಬಜೆಟ್‌ ಅನುದಾನವನ್ನು ವಿಸ್ತರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.