ADVERTISEMENT

ಕ್ವಿಟ್‌ ಇಂಡಿಯಾ: ವಿಪಕ್ಷಗಳ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ

ಪಿಟಿಐ
Published 9 ಆಗಸ್ಟ್ 2023, 12:42 IST
Last Updated 9 ಆಗಸ್ಟ್ 2023, 12:42 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಭ್ರಷ್ಟಾಚಾರ, ವಂಶಾಡಳಿತ ಹಾಗೂ ಓಲೈಸುವಿಕೆಯ ರಾಜಕಾರಣದ ವಿರುದ್ಧ ಭಾರತ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಹಾತ್ಮಗಾಂಧಿ ಅವರು ನಡೆಸಿದ್ದ ಕ್ವಿಟ್ ಇಂಡಿಯಾ ಚಳವಳಿಯನ್ನು ಅವರು ಸ್ಮರಿಸಿದ್ದಾರೆ.

ಆಡಳಿತಾರೂಢ ಬಿಜೆಪಿ ಕ್ವಿಟ್ ಇಂಡಿಯಾ ಚಳವಳಿ ಅಂಗವಾಗಿ ದೇಶದಾದ್ಯಂತ ಕಾರ್ಯಕ್ರಮ ಆಯೋಜಿಸಿದ್ದು, ವಿರೋಧ ಪಕ್ಷಗಳ ವಿರುದ್ಧ ಮೋದಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

‘ಗಾಂಧೀಜಿ ನಾಯಕತ್ವದಲ್ಲಿ ನಡೆದ ಈ ಚಳವಳಿ ಭಾರತವನ್ನು ವಸಾಹತುಶಾಹಿ ಆಡಳಿತದಿಂದ ಮುಕ್ತಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಇದರಲ್ಲಿ ಭಾಗಿಯಾದ ಎಲ್ಲರಿಗೂ ಗೌರವಪೂರ್ವಕ ನಮನಗಳು’ ಎಂದು ಟ್ವೀಟ್‌ ಮಾಡಿರುವ ಅವರು, ‘ಇಂದಿನ ಭಾರತ ‘ಭ್ರಷ್ಟಾಚಾರ ಭಾರತ ಬಿಟ್ಟು ತೊಲಗಲಿ, ವಂಶಾಡಳಿತ ಭಾರತ ಬಿಟ್ಟು ತೊಲಗಲಿ, ಓಲೈಸುವಿಕೆಯು ಭಾರತ ಬಿಟ್ಟು ತೊಲಗಲಿ’ ಎಂದು ಒಕ್ಕೊರಲಿನಿಂದ ಹೇಳುತ್ತಿದೆ’ ಎಂದೂ ಉಲ್ಲೇಖಿಸಿದ್ದಾರೆ.

ADVERTISEMENT

‘ವಿರೋಧ ಪಕ್ಷಗಳು ಭ್ರಷ್ಟಾಚಾರ, ವಂಶಾಡಳಿತ, ತುಷ್ಟೀಕರಣದ ರಾಜಕಾರಣ ಮಾಡುತ್ತಿವೆ’ ಎಂದು ಅವರು ಪುನರುಚ್ಚರಿಸಿದ್ದಾರೆ. ಜನರು ಇವುಗಳಿಂದ ದೂರವಿರಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.