ADVERTISEMENT

ಅ.10ರೊಳಗೆ 41 ರಾಜತಾಂತ್ರಿಕರನ್ನು ವಾಪಸು ಕರೆಸಿಕೊಳ್ಳಿ: ಕೆನಡಾಕ್ಕೆ ಭಾರತ ಸೂಚನೆ?

ಪಿಟಿಐ
Published 3 ಅಕ್ಟೋಬರ್ 2023, 15:57 IST
Last Updated 3 ಅಕ್ಟೋಬರ್ 2023, 15:57 IST
   

ನವದೆಹಲಿ: ದೇಶದಲ್ಲಿರುವ ರಾಜತಾಂತ್ರಿಕರ ಪೈಕಿ 41 ಮಂದಿಯನ್ನು ಅಕ್ಟೋಬರ್‌ 10ರ ಒಳಗಾಗಿ ವಾಪಸ್‌ ಕರೆಸಿಕೊಳ್ಳುವಂತೆ ಕೆನಡಾಕ್ಕೆ ಭಾರತ ಸೂಚಿಸಿದೆ ಎಂದು ‘ಫೈನಾನ್ಶಿಯಲ್ ಟೈಮ್ಸ್’ ಮಂಗಳವಾರ ವರದಿ ಮಾಡಿದೆ.

ಈ ಕುರಿತು ಭಾರತ ಅಥವಾ ಕೆನಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೇಶದಲ್ಲಿರುವ ರಾಜತಾಂತ್ರಿಕರ ಸಂಖ್ಯೆಯನ್ನು ಕಡಿಮೆಗೊಳಿಸುವಂತೆ ಕೆನಡಾಕ್ಕೆ ಸೂಚನೆ ನೀಡಿದ 12 ದಿನಗಳ ನಂತರ, ಭಾರತ ಈ ಕ್ರಮ ಕೈಗೊಂಡಿದೆ. ದೇಶದಲ್ಲಿ ಕೆನಡಾದ 62 ರಾಜತಾಂತ್ರಿಕರಿದ್ದಾರೆ. ಈ ಪೈಕಿ 41 ಮಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತ ಸೆ.21ರಂದು ಸೂಚಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಖಾಲಿಸ್ತಾನ ಪ್ರತ್ಯೇಕತಾವಾದಿ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂಬುದಾಗಿ ಪ್ರಧಾನಿ ಜಸ್ಟಿನ್‌ ಟ್ರೂಡೊ ಆರೋಪಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಒಡಕು ಮೂಡಿದ್ದು, ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿದೆ.

ಕೆನಡಾದ ಈ ಆರೋಪಗಳನ್ನು ಭಾರತ ತಳ್ಳಿ ಹಾಕಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.