ADVERTISEMENT

ಪಾಕ್‌: ಮಸೂದೆಯಲ್ಲಿನ ನ್ಯೂನತೆ ಸರಿಸಡಿಸಲು ಭಾರತ ಒತ್ತಾಯ

ಕುಲಭೂಷಣ್‌ ಜಾಧವ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 17:07 IST
Last Updated 17 ಜೂನ್ 2021, 17:07 IST
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್   

ನವದೆಹಲಿ: ಮರಣದಂಡನೆಗೆ ಗುರಿಯಾಗಿರುವ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಯಾದವ್‌ ಅವರಿಗೆ ಮೇಲ್ಮನವಿ ಸಲ್ಲಿಸಲು ಹಾಗೂ ಕಾನ್ಸುಲರ್‌ ಕಚೇರಿ ನೆರವು ನೀಡುವುದಕ್ಕೆ ಸಂಬಂಧಿಸಿ ಪಾಕಿಸ್ತಾನದ ಸಂಸತ್‌ ಅನುಮೋದಿಸಿರುವ ಮಸೂದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವಂತೆ ಭಾರತ ಗುರುವಾರ ಒತ್ತಾಯಿಸಿದೆ.

‘ಈ ಮಸೂದೆಯಲ್ಲಿ ಹಲವಾರು ನ್ಯೂನತೆಗಳಿವೆ. ಅಂತರರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪಿಗೆ ಅನುಗುಣವಾಗಿರುವಂತೆ ಮಸೂದೆಯನ್ನು ಸರಿಪಡಿಸಬೇಕು ಎಂದು ಪಾಕಿಸ್ತಾನ ಸರ್ಕಾರವನ್ನು ಭಾರತ ಒತ್ತಾಯಿಸಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪಿನನ್ವಯ ಪಾಕಿಸ್ತಾನದ ಸಂಸತ್‌ ಇತ್ತೀಚೆಗೆ ‘ಅಂತರರಾಷ್ಟ್ರೀಯ ನ್ಯಾಯಾಲಯ (ಮರುಪರಿಶೀಲನೆ ಹಾಗೂ ಮರುಪರಿಗಣನೆ) ಮಸೂದೆ–2020’ ಅನ್ನು ಅನುಮೋದಿಸಿದೆ.

ADVERTISEMENT

ಕುಲಭೂಷಣ್‌ ಜಾಧವ್‌ ಅವರಿಗೆ ಕಾನ್ಸುಲರ್‌ ಕಚೇರಿಯ ನೆರವು ಒದಗಿಸುವುದಕ್ಕೆ ಸಂಬಂಧಿಸಿ ಪಕ್ಷಪಾತ ಎಸಗಲಾಗಿದೆಯೇ ಎಂಬುದರ ಕುರಿತು ಕೆಳ ಹಂತದ ನ್ಯಾಯಾಲಯಗಳು ವಿಚಾರಣೆ ನಡೆಸಲು ಈ ಮಸೂದೆ ಅನುವು ಮಾಡಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.