ಸೂರತ್: ‘ಭಾರತವು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವುದು ಸಾಮಾನ್ಯ ಸಾಧನೆಯಲ್ಲ. ಪ್ರತಿಯೊಬ್ಬ ಭಾರತೀಯನೂ ಇದರಿಂದ ಹೆಮ್ಮೆ ಪಡುವಂತಾಗಿದೆ. ಈ ಉತ್ಸುಕತೆಯನ್ನು ನಾವು ಕಾಪಾಡಿಕೊಂಡು ಸಾಗಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್‌ನ ಸೂರತ್ ನಗರದ ಒಲಪಾಡ್ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈದ್ಯಕೀಯ ಶಿಬಿರವನ್ನು ಉದ್ದೇಶಿಸಿ ಗುರುವಾರ ಆನ್‌ಲೈನ್ ಮೂಲಕ ಅವರು ಮಾತನಾಡಿದರು. ಇದೇ ವೇಳೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದವನ್ನೂ ನಡೆಸಿದರು.
‘ನೈಸರ್ಗಿಕ ಕೃಷಿಗೆ ಎಲ್ಲರೂ ಒತ್ತು ನೀಡಬೇಕು. ಕಡಿಮೆ ಖರ್ಚಿನಲ್ಲಿ ಉತ್ತಮ ಫಸಲು ತೆಗೆಯಲು ಇದು ಸಹಕಾರಿ’ ಎಂದು ರೈತರಿಗೆ ಕಿವಿಮಾತು ಹೇಳಿದರು.
‘ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹಿಂದಿನ ಎಂಟು ವರ್ಷಗಳಲ್ಲಿ ಬಡವರಿಗಾಗಿ ದೇಶದಾದ್ಯಂತ ಒಟ್ಟು ಮೂರು ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಪೈಕಿ ಗುಜರಾತ್‌ನಲ್ಲಿ ಸುಮಾರು 10 ಲಕ್ಷ ಮನೆಗಳನ್ನು ಕಟ್ಟಲಾಗಿದೆ. ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಆಸ್ಪತ್ರೆಗಳು ಗುಜರಾತ್‌ನಲ್ಲಿವೆ. ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳ ಸಂಖ್ಯೆ 11 ರಿಂದ 31ಕ್ಕೆ ಹೆಚ್ಚಿದೆ. ರಾಜ್‌ಕೋಟ್‌ನಲ್ಲಿ ಏಮ್ಸ್ ನಿರ್ಮಾಣ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.