ADVERTISEMENT

ಲೋಕಸಭೆ ಚುನಾವಣೆ | ಜೂನ್‌ 4ರ ಬಳಿಕ ‘ಇಂಡಿಯಾ’ ಮೈತ್ರಿಕೂಟದಲ್ಲಿ ಬಿರುಕು: ಮೋದಿ

ಪಿಟಿಐ
Published 16 ಮೇ 2024, 13:28 IST
Last Updated 16 ಮೇ 2024, 13:28 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಪ್ರತಾಪ್‌ಗಢ: ಜೂನ್‌ 4ರ ಬಳಿಕ ‘ಇಂಡಿಯಾ’ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಲಿದೆ. ಲೋಕಸಭೆ ಚುನಾವಣೆಯ ಸೋಲಿಗೆ ಕಾರಣ ಯಾರೆಂದು ಮತ್ತು ಯಾರನ್ನು ಬಲಿಪಶು ಮಾಡಬಹುದು ಎಂಬ ಚರ್ಚೆಗಳು ನಡೆಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಅಮೇಠಿಯಿಂದ ಹಿಂದೆ ಸರಿದಿರುವ ರಾಹುಲ್‌ ಗಾಂಧಿ, ರಾಯ್‌ಬರೇಲಿಯಲ್ಲಿ ಸೋಲನ್ನು ಅನುಭವಿಸಲಿದ್ದಾರೆ ಎಂದು ಹೇಳಿದ್ದಾರೆ.

‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರನ್ನು ಪ್ರಧಾನಿ ಹುದ್ದೆಗೇರಿಸುವ ಚಿಂತನೆ ಮಾಡಿದೆ. ‘ವಿರೋಧ ಪಕ್ಷಗಳು ಮೂರಂಕಿಯ ಸ್ಥಾನಗಳನ್ನು ಪಡೆಯುವ ಅಥವಾ ಅಧಿಕಾರದ ಸನಿಹ ತಲುಪುವ ಸಾಧ್ಯತೆಯೇ ಇಲ್ಲ. ಆದರೂ, ಅವಕಾಶ ಲಭಿಸಿದರೆ ಐದು ವರ್ಷಗಳಲ್ಲಿ ಐವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಲು ಯೋಜನೆ ಹಾಕಿಕೊಂಡಿವೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಶ್ರೀಮಂತ ಕುಟುಂಬದಲ್ಲಿ ಜನಿಸಿರುವ ರಾಹುಲ್‌ ಗಾಂಧಿ ಅವರಿಗೆ ದೇಶ ನಡೆಸಲು ಆಗುವುದಿಲ್ಲ. ಇದು ಅವರಿಗೆ ಅಸಾಧ್ಯದ ಕೆಲಸ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ ವಿರುದ್ಧ ಕಿಡಿಕಾರಿರುವ ಮೋದಿ, ಲಖನೌ ಮತ್ತು ದೆಹಲಿ ರಾಜಕುಮಾರರು ಬೇಸಿಗೆ ರಜೆಯಲ್ಲಿ ವಿದೇಶಕ್ಕೆ ತೆರಳುತ್ತಾರೆ ಎಂದು ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆಯ ಏಳು ಹಂತಗಳ ಮತ ಎಣಿಕೆಯು ಜೂನ್ 4ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.