ನವದೆಹಲಿ: ಪೂರ್ವ ಲಡಾಖ್‌ನ ಡೆಮ್‌ಚೋಕ್, ಡೆಪ್ಸಾಂಗ್ ತಾಣಗಳಿಂದ ಸೇನೆಗಳನ್ನು ವಾಪಸು ಕರೆಯಿಸಿಕೊಳ್ಳುವ ಪ್ರಕ್ರಿಯೆ ‘ಅಂತಿಮ ಹಂತದಲ್ಲಿದೆ’ ಎಂದು ಮೂಲಗಳು ತಿಳಿಸಿವೆ.
ಈ ಪ್ರಕ್ರಿಯೆ ಅಕ್ಟೋಬರ್ 28–29ರ ವೇಳೆಗೆ ಪೂರ್ಣವಾಗಲಿದೆ ಎಂದು ಇತ್ತೀಚೆಗೆ ಸೇನೆಯ ಮೂಲಗಳು ತಿಳಿಸಿದ್ದವು.
ಮೊದಲು ರಾಜತಾಂತ್ರಿಕ ಹಂತದಲ್ಲಿ ನಂತರ ಸೇನಾ ಹಂತದಲ್ಲಿ ಮಾತುಕತೆಗಳು ನಡೆದಿದ್ದವು. ಅಂತಿಮವಾಗಿ ಸೇನೆಯ ಕಮಾಂಡರ್ ಹಂತದ ಮಾತುಕತೆ ಬಳಿಕ ಒಡಂಬಡಿಕೆಗೆ ಸಹಿ ಹಾಕಲಾಗಿತ್ತು.
ಪೂರ್ವ ಲಡಾಖ್‌ನಲ್ಲಿ 2020ರ ಏಪ್ರಿಲ್ ಅವಧಿಯಲ್ಲಿದ್ದ ಸ್ಥಿತಿಯ ಮರುಸ್ಥಾಪನೆ ಒಪ್ಪಂದದ ಗುರಿ. ಗಾಲ್ವಾನ್ ಕಣಿವೆಯಲ್ಲಿ ಜೂನ್ 2020ನಲ್ಲಿ ಘರ್ಷಣೆಯಾದ ಬಳಿಕ ಅಲ್ಲಿ ಅನಿಶ್ಚಿತ ಸ್ಥಿತಿ ಮೂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.