ಹೈದರಾಬಾದ್: ‘ಕೋವಿಡ್–19ಗೆ ಸಂಬಂಧಿಸಿ ಭಾರತದಲ್ಲಿ ಸಮುದಾಯ ಮಟ್ಟದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿದೆ. ಹೀಗಾಗಿ, ಚೀನಾದಲ್ಲಿ ಈಗ ಆತಂಕಕ್ಕೆ ಕಾರಣವಾಗಿರುವ ವೈರಸ್‌ನ ಬಿಎಫ್.7 ಉಪತಳಿಯ ಸೋಂಕು ಭಾರತದಲ್ಲಿ ಗಂಭೀರ ಸ್ವರೂಪದ್ದಾಗಿರುವುದಿಲ್ಲ’ ವಿಜ್ಞಾನಿಗಳು ಹೇಳಿದ್ದಾರೆ.
‘ವೈರಸ್‌ನ ಯಾವುದೇ ರೂಪಾಂತರಿ ತಳಿಯಾದರೂ ಸರಿ ಎಲ್ಲರೂ ಕೋವಿಡ್‌ಗೆ ಸಂಬಂಧಿಸಿದ ಶಿಷ್ಟಾಚಾರವನ್ನು ಪಾಲಿಸುವುದು ಮುಖ್ಯ’ ಎಂದು ಸಿಎಸ್‌ಐಆರ್‌ನ ಅಂಗಸಂಸ್ಥೆಯಾದ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲೆಕ್ಯುಲಾರ್ ಬಯೋಲಜಿ (ಸಿಸಿಎಂಬಿ) ನಿರ್ದೇಶಕ ವಿನಯ್.ಕೆ.ನಂದಿಕೂರಿ ಹೇಳಿದ್ದಾರೆ.
‘ಕೊರೊನಾ ವೈರಸ್‌ನ ಎಲ್ಲ ರೂಪಾಂತರಿ ತಳಿಗಳು ವ್ಯಕ್ತಿಯ ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಲಸಿಕೆ ಪಡೆದವರಲ್ಲಿ ಹಾಗೂ ಈ ಮೊದಲು ಓಮೈಕ್ರಾನ್ ಸೋಂಕಿಗೆ ಒಳಗಾದವರಲ್ಲೂ ಮತ್ತೊಮ್ಮೆ ಸೋಂಕು ಕಾಣಿಸುವಂತೆ ಮಾಡುತ್ತವೆ. ಈ ಅಂಶವೇ ಕಳವಳಕಾರಿ. ಹಾಗಾಗಿ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.