ADVERTISEMENT

ಬಿತ್ತನೆ ಬೀಜ ಉತ್ಪಾದನೆ: ಭಾರತ ಅಗ್ರ

ವಿಶ್ವಸಂಸ್ಥೆಯ ನಿರ್ದೇಶನದಲ್ಲಿ ನಡೆದ ಅಧ್ಯಯನದಲ್ಲಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 18:55 IST
Last Updated 12 ನವೆಂಬರ್ 2018, 18:55 IST
ಆಹಾರ ಧಾನ್ಯಗಳು
ಆಹಾರ ಧಾನ್ಯಗಳು   

ನವದೆಹಲಿ: ಬಿತ್ತನೆ ಬೀಜಗಳ ಉತ್ಪಾದನೆಯಲ್ಲಿ ಭಾರತವು ಏಷ್ಯಾದಲ್ಲಿಯೇ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.

24 ಪ್ರತಿಷ್ಠಿತ ಜಾಗತಿಕ ಬಿತ್ತನೆ ಬೀಜಗಳ ಕಂಪನಿಗಳ ಪೈಕಿ 18 ಕಂಪನಿಗಳು ಭಾರತದಲ್ಲಿ ತಳಿ ಅಭಿವೃದ್ಧಿ ಹಾಗೂ ಉತ್ಪಾದನಾ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿವೆ ಎಂದು ವಿಶ್ವಸಂಸ್ಥೆಯ ನಿರ್ದೇಶನದಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ.

‘ಬೀಜ ಉತ್ಪಾದನಾ ವಲಯದ ಪ್ರಮುಖ 24 ಕಂಪನಿಗಳ ಮೌಲ್ಯಮಾಪನ ನಡೆಸಿದ್ದು, 21 ಕಂಪನಿಗಳು ಭಾರತದಲ್ಲಿ ಬಿತ್ತನೆ ಬೀಜ ಮಾರಾಟ ನಡೆಸುತ್ತಿವೆ. 18 ಕಂಪನಿಗಳು ತಳಿ ಅಭಿವೃದ್ಧಿ ಹಾಗೂ ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿವೆ’ ಎಂದುದಕ್ಷಿಣ ಮತ್ತು ಆಗ್ನೇಯ ಏಷ್ಯಾ (ಎಎಸ್‌ಐ) ಬೀಜ ಸೂಚ್ಯಂಕದ ಆಧಾರದ ಮೇಲೆ ವಿಶ್ವ ಬೆಂಚ್‌ಮಾರ್ಕಿಂಗ್‌ ಅಲಿಯನ್ಸ್‌ (ಡಬ್ಲ್ಯೂಬಿಎ) ಅಧ್ಯಯನ ವರದಿ ಪ್ರಕಟಿಸಿದೆ.

ADVERTISEMENT

ಇದೇ ಮೊದಲ ಬಾರಿ ಬೀಜ ಸೂಚ್ಯಂಕ ಪ್ರಕಟಗೊಂಡಿದ್ದು ಭಾರತದ ಅದ್ವಂತಾ, ಆಕ್ಸನ್‌ ಹೈವೆಗ್‌, ನಾಮಧಾರಿ ಸೀಡ್ಸ್‌ ಮತ್ತು ನುಝಿವೀಡು ಸೀಡ್ಸ್‌ ಕಂಪನಿ 10 ಜಾಗತಿಕ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಥಾಯ್ಲೆಂಡ್‌ ಮೂಲದ ಈಸ್ಟ್-ವೆಸ್ಟ್ ಸೀಡ್‌ ಕಂಪನಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಜಾಗತಿಕ ಮತ್ತು ಪ್ರಾದೇಶಿಕ ಬೀಜ ಉದ್ಯಮಗಳು ಭಾರತದಲ್ಲಿ ಸಣ್ಣ ರೈತರ ಬೆಳೆ ಇಳುವರಿಯನ್ನು ಹೆಚ್ಚಿಸಲು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ 10 ಕೋಟಿ ಸಣ್ಣ ರೈತರಿದ್ದು, ಶೇ 80 ರಷ್ಟು ಆಹಾರಧಾನ್ಯ ಪೂರೈಸುತ್ತಾರೆ. ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಸಾಧಿಸುವ ನಿಟ್ಟಿನಲ್ಲಿ ಹೆಚ್ಚಿನ ಆಹಾರ ಪದಾರ್ಥ ಬಳೆಯಲು ಈ ರೈತರಿಗೆ ಸಹಾಯ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಥಾಯ್ಲೆಂಡ್‌ನಲ್ಲಿ 11 ಮತ್ತು ಇಂಡೋನೇಷ್ಯಾದಲ್ಲಿ ಎಂಟು ಕಂಪನಿಗಳು ತಳಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.