ನವದೆಹಲಿ: ಕೋವಿಡ್–19 ಹರಡುವಿಕೆ ತಡೆಯುವುದಕ್ಕಾಗಿ ನಾವು ಧರಿಸುವ ಮಾಸ್ಕ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದರಿಂದಲೂ ಸೋಂಕು ಹರಡಬಹುದು. ಈ ವಿಚಾರವಾಗಿ ಕೇಂದ್ರ ಸರ್ಕಾರವೇ ಎಚ್ಚರಿಕೆ ಸಂದೇಶ ನೀಡಿದೆ.
‘ಮಾಸ್ಕ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡುವುದನ್ನು ಮರೆಯದಿರಿ. ಇಲ್ಲಿವೆ ಸರಿಯಾದ ಸೂಚನೆಗಳು’ ಎಂದು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಜತೆಗೆ, ಕೇಂದ್ರ ಸರ್ಕಾರದ ಸಂದೇಶವನ್ನು ಲಗತ್ತಿಸಿದ್ದಾರೆ.
‘ಬಳಸಿದ ನಂತರ ಮಾಸ್ಕ್ ಅನ್ನು ತೆಗೆದು ಮಡಚಬೇಕು. ಬಳಿಕ ಅದರಲ್ಲಿರುವ ದಾರದ ನೆರವಿನಿಂದ ಮಾಸ್ಕ್ ಅನ್ನು ಸುತ್ತಬೇಕು. ಲಕೋಟೆಯೊಂದರಲ್ಲಿ ಹಾಕಿ ಮುಚ್ಚಿದ ಕಸದ ತೊಟ್ಟಿಗೆ ಹಾಕಬೇಕು. ನಂತರ ಕೈಗಳನ್ನು ಚೆನ್ನಾಗಿ ತೊಳೆಯಬೇಕು’ ಎಂದು ಸರ್ಕಾರದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಮಾಸ್ಕ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಅದರ ಮೂಲಕವೇ ಕೋವಿಡ್ ಹರಡಬಹುದು ಎಂದೂ ಸರ್ಕಾರ ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.