ADVERTISEMENT

ಫಿಜಿಯಲ್ಲಿನ ಶ್ರೀಸತ್ಯ ಸಾಯಿ ಸಂಜೀವಿನಿ ಮಕ್ಕಳ ಹೃದಯ ಆಸ್ಪತ್ರೆ ಉದ್ಘಾಟಿಸಿದ ಮೋದಿ

ಪಿಟಿಐ
Published 27 ಏಪ್ರಿಲ್ 2022, 13:13 IST
Last Updated 27 ಏಪ್ರಿಲ್ 2022, 13:13 IST
ನರೇಂದ್ರ ಮೋದಿ, ಪ್ರಧಾನಿ
ನರೇಂದ್ರ ಮೋದಿ, ಪ್ರಧಾನಿ   

ನವದೆಹಲಿ: ಭಾರತ ಮತ್ತು ಫಿಜಿ ದೇಶಗಳ ಸಂಬಂಧಗಳು ಪರಸ್ಪರ ಗೌರವ ಮತ್ತು ಸಹಕಾರಗಳ ಮೇಲೆ ನಿಂತಿವೆ. ಅಲ್ಲದೆ ಉಭಯ ದೇಶಗಳ ಸಂಬಂಧವು ಮತ್ತಷ್ಟು ಗಟ್ಟಿಯಾಗಿ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಫಿಜಿಯಲ್ಲಿ ಸ್ಥಾ‍ಪಿಸಲಾಗಿರುವ ಶ್ರೀ ಸತ್ಯ ಸಾಯಿ ಸಂಜೀವಿನಿ ಮಕ್ಕಳ ಹೃದಯ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, 'ಫಿಜಿ ದೇಶವು ಭಾರತದ ಆದ್ಯತೆಯ ದೇಶವಾಗಿದೆ. ಭಾರತ ಮತ್ತು ಫಿಜಿ ದೇಶಗಳ ಮಧ್ಯೆ ಬಹುದೊಡ್ಡ ಸಮುದ್ರವಿದೆ. ನಮ್ಮನ್ನು ಸಂಸ್ಕೃತಿಗಳು ಒಟ್ಟಾಗಿಸಿವೆ' ಎಂದರು.

'ಭಾರತವು ತನ್ನ ನಾಗರಿಕರಷ್ಟೇ ಅಲ್ಲದೆ, ವಿಶ್ವದ ಜನತೆಯ ಬಗ್ಗೆ ಕಾಳಜಿ ಹೊಂದಿದೆ. ಕೊರೊನಾ ಸಂಕಷ್ಟದ ಅವಧಿಯಲ್ಲಿ 150 ದೇಶಗಳಿಗೆ ಔಷಧಗಳು ಮತ್ತು ಇತರ ನೆರವುಗಳನ್ನು ನೀಡಲಾಗಿತ್ತು' ಎಂದು ಹೇಳಿದರು.

ADVERTISEMENT

ಶ್ರೀ ಸತ್ಯ ಸಾಯಿ ಫೌಂಡೇಷನ್‌ನ ಸೇವೆಯನ್ನು ಕೊಂಡಾಡಿದ ಪ್ರಧಾನಿ, ಶಿಕ್ಷಣ, ಆರೋಗ್ಯ ಮತ್ತು ಬಡವರ ಕಲ್ಯಾಣ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.