ADVERTISEMENT

ಅನಿಶ್ಚಿತತೆಯಲ್ಲೂ ಪ್ರಬಲ ಸಹಭಾಗಿತ್ವ: ನರೇಂದ್ರ ಮೋದಿ

ಪಿಟಿಐ
Published 26 ಅಕ್ಟೋಬರ್ 2024, 0:01 IST
Last Updated 26 ಅಕ್ಟೋಬರ್ 2024, 0:01 IST
<div class="paragraphs"><p>ನವದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು&nbsp;ಜರ್ಮನಿಯ ಚಾನ್ಸಲರ್‌ ಓಲಾಫ್‌ ಶೋಲ್ಜ್ ಶುಕ್ರವಾರ ಸಮಾಲೋಚಿಸಿದರು&nbsp; &nbsp; &nbsp;</p></div>

ನವದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸಲರ್‌ ಓಲಾಫ್‌ ಶೋಲ್ಜ್ ಶುಕ್ರವಾರ ಸಮಾಲೋಚಿಸಿದರು     

   

ಪಿಟಿಐ ಚಿತ್ರ

ನವದೆಹಲಿ: ‘ವಿಶ್ವವು ಉದ್ವಿಗ್ನತೆ, ಸಂಘರ್ಷ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತಿರುವ ಸಮಯದಲ್ಲೂ, ಭಾರತ ಮತ್ತು ಜರ್ಮನಿ ನಡುವಿನ ಕಾರ್ಯತಂತ್ರದ ಸಹಭಾಗಿತ್ವವು ಪ್ರಬಲವಾಗಿ ಹೊರಹೊಮ್ಮಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ADVERTISEMENT

ಜರ್ಮನಿಯ ಚಾನ್ಸಲರ್‌ ಒಲಾಫ್‌ ಶೋಲ್ಜ್ ಅವರೊಂದಿಗೆ ಸಮಾಲೋಚನೆ ನಡೆಸಿದ ಮೋದಿ, ‘ಭಾರತ– ಜರ್ಮನಿ ನಡುವಿನದ್ದು ವಹಿವಾಟಿನ ಸಂಬಂಧವಲ್ಲ; ಎರಡು ಸಮರ್ಥ ಹಾಗೂ ಬಲಾಢ್ಯ ಪ್ರಜಾಪ್ರಭುತ್ವ ರಾಷ್ಟ್ರಗಳ ಪರಿವರ್ತನೆಯ ಪಾಲುದಾರಿಕೆ
ಆಗಿದೆ’ ಎಂದಿದ್ದಾರೆ.

‘ರಕ್ಷಣೆ, ತಂತ್ರಜ್ಞಾನ, ಇಂಧನ, ಹಸಿರು ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚುತ್ತಿದೆ. ಇದು ಪರಸ್ಪರ ನಂಬಿಕೆಯ ಸಂಕೇತವಾಗಿದೆ’ ಎಂದು ಹೇಳಿದರು.

ಜರ್ಮನಿಯು ಘೋಷಿಸಿರುವ ‘ಫೋಕಸ್ ಆನ್‌ ಇಂಡಿಯಾ’ ಕಾರ್ಯತಂತ್ರವನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.