ನವದೆಹಲಿ: ಕೋವಿಡ್‌ನ ಋಣಾತ್ಮಕ ಪರಿಣಾಮದಿಂದ ಹೊರಬಂದಿರುವ ಭಾರತ, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
'ಪಿಎಂ-ಕೇರ್ಸ್' ಯೋಜನೆಯ ಸೌಲಭ್ಯಗಳನ್ನು ಮಕ್ಕಳಿಗೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, 'ಕೋವಿಡ್ ಪಿಡುಗಿನ ಸಮಯದಲ್ಲಿ ಭಾರತವು ತನ್ನ ವಿಜ್ಞಾನಿಗಳು, ವೈದ್ಯರು, ಯುವಕರ ಮೇಲೆ ನಂಬಿಕೆಯನ್ನು ಇರಿಸಿತು. ನಾವು ಭರವಸೆಯ ಕಿರಣವಾಗಿ ಹೊರಬಂದಿದ್ದೇವೆ. ಇದರಿಂದಾಗಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಅಲ್ಲದೆ ಜಗತ್ತಿಗೆ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ' ಎಂದು ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ವಿವಿಧ ರಾಷ್ಟ್ರಗಳಿಗೆ ಕೋವಿಡ್ ಲಸಿಕೆ, ಔಷಧಿ ಹಾಗೂ ವೈದ್ಯಕೀಯ ನೆರವನ್ನು ಒದಗಿಸಿರುವುದನ್ನು ಪ್ರಧಾನಿ ಉಲ್ಲೇಖಿಸಿದರು.
'ದೇಶದ ಎಲ್ಲ ನಾಗರಿಕರಿಗೂ ಲಸಿಕೆಯನ್ನು ಒದಗಿಸಿದ್ದೇವೆ. ದೇಶದಲ್ಲಿ 200 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ' ಎಂದು ಹೇಳಿದರು.
'ಕಳೆದ ಎಂಟು ವರ್ಷಗಳಲ್ಲಿ ಭಾರತ ಸಾಧಿಸಿರುವುದನ್ನು ಯಾರೂ ಊಹಿಸಿರಲಿಲ್ಲ. ಇದರಿಂದ ವಿಶ್ವದಾದ್ಯಂತ ಭಾರತದ ಹೆಮ್ಮೆ ಹೆಚ್ಚಿದ್ದು, ಜಾಗತಿಕ ಮಟ್ಟದಲ್ಲಿ ದೇಶದ ಶಕ್ತಿ ವರ್ಧಿಸಿದೆ' ಎಂದು ಮೋದಿ ತಿಳಿಸಿದರು.
ಮಕ್ಕಳಿಗೆ ವಿದ್ಯಾರ್ಥಿವೇತನ, ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಹೆಲ್ತ್ ಕಾರ್ಡ್ ಮತ್ತು ಪಿಎಂ-ಕೇರ್ಸ್‌ಯೋಜನೆಯಲ್ಲಿ ಮಕ್ಕಳಿಗೆ ಪಾಸ್‌ಬುಕ್ ಅನ್ನು ಪ್ರಧಾನಿ ಮೋದಿ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.