ADVERTISEMENT

ಸಲೀಸು ವ್ಯಾಪಾರ: 77ನೇ ಸ್ಥಾನಕ್ಕೆ ಜಿಗಿದ ಭಾರತ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 19:31 IST
Last Updated 31 ಅಕ್ಟೋಬರ್ 2018, 19:31 IST
   

ನವದೆಹಲಿ: ವಿಶ್ವಸಂಸ್ಥೆಯ ‘ಸುಲಲಿತ ವ್ಯಾಪಾರ ಸ್ಥಿತಿ’ ವರದಿಯಲ್ಲಿ ಭಾರತವು 77ನೇ ಸ್ಥಾನಕ್ಕೆ ನೆಗೆದಿದೆ. ಕಳೆದ ವರ್ಷದ ವರದಿಯಲ್ಲಿ ಭಾರತದ ಸ್ಥಾನ ನೂರು ಆಗಿತ್ತು. ಒಂದೇ ವರ್ಷದಲ್ಲಿ 23 ಸ್ಥಾನಗಳಷ್ಟು ಮೇಲಕ್ಕೆ ದೇಶ ಏರಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳು ಈ ಏರಿಕೆಗೆ ಮುಖ್ಯ ಕಾರಣ. ಇದರಿಂದಾಗಿ ದೇಶವು ಈಗ ಅತ್ಯಾಕರ್ಷಕ ಹೂಡಿಕೆ ತಾಣವಾಗಿ ಮಾರ್ಪಟ್ಟಿದೆ ಎಂದು ಕೈಗಾರಿಕಾ ಸಂಘಟನೆಗಳು ಹಾಗೂ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮ ಆರಂಭಿಸುವ ಮತ್ತು ಉದ್ಯಮ ನಡೆಸುವ ವಿಚಾರಕ್ಕೆ ಸಂಬಂಧಿಸಿ ಹತ್ತು ಮಾನದಂಡಗಳ ಪೈಕಿ ಆರರಲ್ಲಿ ಭಾರತದ ಸ್ಥಿತಿ ಗಣನೀಯವಾಗಿ ಉತ್ತಮಗೊಂಡಿದೆ. ನಿರ್ಮಾಣ ಪರವಾನಗಿಗಳು, ವಿದ್ಯುತ್‌, ಸಾಲ ಲಭ್ಯತೆ, ತೆರಿಗೆ ಪಾವತಿ, ಗಡಿಯಾಚೆಗಿನ ವ್ಯವಹಾರ ಮುಂತಾದವು ಈ ಮಾನದಂಡಗಳಲ್ಲಿ ಸೇರಿವೆ.

ADVERTISEMENT

190 ದೇಶಗಳ ಈ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್‌ ಮೊದಲ ಸ್ಥಾನದಲ್ಲಿದ್ದರೆ ಸಿಂಗಪುರ, ಡೆನ್ಮಾರ್ಕ್‌ ಮತ್ತು ಹಾಂಕಾಂಗ್‌ ನಂತರದ ಸ್ಥಾನಗಳಲ್ಲಿವೆ. ಅಮೆರಿಕಕ್ಕೆ ಎಂಟನೇ ಸ್ಥಾನವಿದ್ದರೆ ಚೀನಾ 46ನೇ ರ್‍ಯಾಂಕ್‌ ಪಡೆದಿದೆ. ನೆರೆಯ ಪಾಕಿಸ್ತಾನ 136ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಸುಧಾರಣೆಗಳನ್ನು ಕೈಗೊಂಡ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವನ್ನೂ ವಿಶ್ವಸಂಸ್ಥೆಯು ಸೇರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.