ಮುಂಬೈ: ಇನ್ಪುಟ್: ಭಾರತ ಮತ್ತು ಇಂಡೋನೇಶಿಯಾ ಇಬ್ಬರ ನಡುವೆ ಇರುವ ದ್ವಿಪಕ್ಷೀಯ ಒಪ್ಪಂದವು ವಾಣಿಜ್ಯದಲ್ಲಿ ಸ್ಥಾನೀಯ ಮುದ್ರೆಗಳ ಬಳಕೆಯನ್ನು ಪ್ರೋತ್ಸಾಹಿಸಲು ಭಾರತದ ರಿಸರ್ವ್ ಬ್ಯಾಂಕ್ ಮತ್ತು ಇಂಡೋನೇಶಿಯಾ ಬ್ಯಾಂಕ್ ಒಪ್ಪಂದಕ್ಕೆ ಸಂತಕ ಮಾಡಿವೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ ಮತ್ತುಬ್ಯಾಂಕ್ ಇಂಡೊನೇಷ್ಯಾದ ಗವರ್ನರ್ ಪೆರ‍್ರಿ ವಾರ್ಜಿಯೊ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಭಾರತದ ರೂಪಾಯಿ ಹಾಗೂ ಇಂಡೊನೇಷ್ಯಾ ಕರೆನ್ಸಿ ರುಪಿಯಾಕ್ಕೆ ಉತ್ತೇಜನ ನೀಡಲು ಒಪ್ಪಂದವು ನೆರವಾಗಲಿದೆ. ಇದರಿಂದ ಎರಡೂ ಕರೆನ್ಸಿಗಳು ಬಲಗೊಳ್ಳಲಿವೆ. ರಫ್ತುದಾರರು ಮತ್ತು ಆಮದುದಾರರು ಇನ್‌ವಾಯ್ಸ್ ಸೃಷ್ಟಿಸಿ ಸ್ಥಳೀಯ ಕರೆನ್ಸಿಗ ಳಲ್ಲೇ ಪಾವತಿ ಮಾಡಬಹುದಾಗಿದೆ ಎಂದು ಆರ್‌ಬಿಐ ಪ್ರಕಟಣೆ
ತಿಳಿಸಿದೆ.
ಜೊತೆಗೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವಹಿವಾಟುಗಳು ಸುಗಮವಾಗಿ ನಡೆಯುತ್ತವೆ. ಇದು ವ್ಯಾಪಾರ ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯೂ ಬೆಳವಣಿಗೆ ಸಹಕಾರಿ ಯಾಗಲಿದೆ. ಎರಡು ದೇಶಗಳ ನಡುವೆ ಚಾರಿತ್ರಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳು ಗಟ್ಟಿಗೊಳ್ಳಲು ನೆರವಾಗುತ್ತದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.