ನವದೆಹಲಿ: ಭಾರತದಲ್ಲಿರುವ ಹಿಂದೂಗಳ ಸಂಖ್ಯೆ 100 ಕೋಟಿ. ಹೀಗಿರುವಾಗ ಇದು ಹಿಂದೂ ರಾಷ್ಟ್ರ. ಮುಸ್ಲಿಂ ಮತ್ತು ಕ್ರೈಸ್ತರಿರುವ ಹಲವಾರು ದೇಶಗಳಿವೆ. ನಮ್ಮಸಂಸ್ಕೃತಿ ಜೀವಂತವಾಗಿರುವ ಭಾರತವೆಂಬ ದೇಶದಲ್ಲಿ ನಾವಿದ್ದೇವೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಹೇಳಿದ್ದಾರೆ.
ಮುಸ್ಲಿಂ ಮತ್ತು ಕ್ರೈಸ್ತ ರಾಷ್ಟ್ರಗಳಿರುವಾಗ ಹಿಂದೂ ರಾಷ್ಟ್ರ ಯಾಕಿರಬಾರದು? ಎಂದು ಪ್ರಶ್ನಿಸಿರುವ ರವಿ ಕಿಶನ್, ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ವಿಪಕ್ಷಗಳು ಅನಗತ್ಯಸಮಸ್ಯೆ ಸೃಷ್ಟಿಸುತ್ತಿವೆ ಎಂದಿದ್ದಾರೆ
ಭೋಜ್‌ಪುರಿ, ಬಾಲಿವುಡ್ ನಟನಾಗಿರುವ ರವಿ ಕಿಶನ್ ಉತ್ತರ ಪ್ರದೇಶದ ಗೋರಖ್‌ಪುರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
ಮುಸ್ಲಿಮೇತರ ವಲಸಿಗರು ಮತ್ತು ನಿರಾಶ್ರಿತರಿಗೆ ಧರ್ಮದ ಆಧಾರದಲ್ಲಿ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡುವ ‘ಪೌರತ್ವ ತಿದ್ದುಪಡಿ ಮಸೂದೆ–2019’ನ್ನು ಸಂಸತ್ತಿನ ಅಧಿವೇಶನ ದಲ್ಲಿ ಮಂಡಿಸಲು ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿತ್ತು.
ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.