ADVERTISEMENT

ಎಚ್ಚರಿಕೆಯಿಂದ ಇರುವಂತೆ ಇರಾನ್‌ನಲ್ಲಿನ ಭಾರತೀಯರಿಗೆ ಸಲಹೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2024, 7:42 IST
Last Updated 2 ಅಕ್ಟೋಬರ್ 2024, 7:42 IST
   

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ, ತೀರಾ ಅನಿವಾರ್ಯ ಸಂದರ್ಭ ಇಲ್ಲದಿದ್ದರೆ ಇರಾನ್‌ಗೆ ತೆರಳಬೇಡಿ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತದ ಪ್ರಜೆಗಳಿಗೆ ಸಲಹೆ ನೀಡಿದೆ.

ಇರಾನ್‌ನಲ್ಲಿ ಇರುವ ಭಾರತದ ಪ್ರಜೆಗಳು ಜಾಗರೂಕರಾಗಿ ಇರಬೇಕು ಹಾಗೂ ಆ ದೇಶದ ರಾಜಧಾನಿ ಟೆಹ್ರಾನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಜೊತೆ ಸಂಪರ್ಕದಲ್ಲಿರಬೇಕು ಎಂದು ಅದು ಹೇಳಿದೆ.

ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಆ ಸಂಘಟನೆಯ ಇತರ ಪ್ರಮುಖ ಕಮಾಂಡರ್‌ಗಳ ಹತ್ಯೆಗೆ ಪ್ರತಿಯಾಗಿ ಇರಾನ್ ದೇಶವು ಇಸ್ರೇಲ್‌ ಮೇಲೆ ಸರಿಸುಮಾರು 200 ಕ್ಷಿಪಣಿಗಳಿಂದ ದಾಳಿ ನಡೆಸಿದ ನಂತರ ಸಚಿವಾಲಯವು ಈ ಸಲಹೆ ನೀಡಿದೆ.

ADVERTISEMENT

ಕ್ಷಿಪಣಿಗಳಿಂದ ದಾಳಿ ನಡೆಸಿದ್ದಕ್ಕೆ ಇರಾನ್ ಬೆಲೆ ತೆರಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.