ADVERTISEMENT

ಭಾರತ ಮಧ್ಯಸ್ಥಿಕೆ ವಹಿಸಿ ಗಾಜಾ, ಉಕ್ರೇನ್ ಯುದ್ಧ ನಿಲ್ಲಿಸಬೇಕು: ಸಂಸದ ನದ್ವಿ

ಪಿಟಿಐ
Published 19 ಜುಲೈ 2024, 13:42 IST
Last Updated 19 ಜುಲೈ 2024, 13:42 IST
   

ನವದೆಹಲಿ: ಭಾರತ ಮಧ್ಯಸ್ಥಿಕೆ ವಹಿಸುವ ಮೂಲಕ ಗಾಜಾ ಮತ್ತು ಉಕ್ರೇನ್‌ನಲ್ಲಿನ ಯುದ್ಧವನ್ನು ನಿಲ್ಲಿಸಬೇಕು. ಏಕೆಂದರೆ ವಿಶ್ವದಲ್ಲಿ ಮಾನವೀಯ ಧೋರಣೆಗೆ ಭಾರತಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಮೌಲಾನಾ ಮೊಹಿಬುಲ್ಲಾ ನದ್ವಿ ಹೇಳಿದರು.

‘ಪಿಟಿಐ’ನೊಂದಿಗೆ ಮಾತನಾಡಿದ ಅವರು, ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ಮೇಲಿನ ದೌರ್ಜನ್ಯದ ಬಗ್ಗೆ ಜಗತ್ತು ಕಣ್ಣು ಮುಚ್ಚಿ ಕುಳಿತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಾಜಾದಲ್ಲಿ ಯುದ್ಧವನ್ನು ನಿಲ್ಲಿಸಲು ಭಾರತ ಮಧ್ಯಪ್ರವೇಶಿಸಬೇಕು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ ಹಾಗೂ ಮೌಲಾನಾ ಅಬ್ದುಲ್ ಕಲಾಂ ಅವರಂತೆ ನಾವು ತುಳಿತಕ್ಕೊಳಗಾದವರ ಪರವಾಗಿ ನಿಲ್ಲಬೇಕಾಗಿದೆ ಎಂದರು.

ADVERTISEMENT

‘ಹೇಗೆ ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ಭಾರತೀಯನಿಗೂ ಈ ದೇಶದ ಮೇಲೆ ಹಕ್ಕಿದೆಯೋ, ಅದೇ ರೀತಿ ಪ್ಯಾಲೆಸ್ಟೀನ್‌ನಲ್ಲಿ ಜನಿಸಿದ ಪ್ರತಿಯೊಬ್ಬ ಅರಬ್ಬನಿಗೂ ಪ್ಯಾಲೆಸ್ಟೀನ್ ಮೇಲೆ ಹಕ್ಕಿದೆ' ಎಂದು ಮಹಾತ್ಮ ಗಾಂಧಿ ಹೇಳಿದ್ದನ್ನು ನದ್ವಿ ಉಲ್ಲೇಖಿಸಿದ್ದಾರೆ.

ಯುದ್ಧದಲ್ಲಿ ಪ್ಯಾಲೆಸ್ಟೀನಿಯನ್ನರನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ. ಅವರ ಪರವಾಗಿ ಮಾತನಾಡದಿರುವುದು ಇಡೀ ಮಾನವಕುಲಕ್ಕೆ ನಷ್ಟ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.