ನವದೆಹಲಿ: ಪುಲ್ವಾಮಾ ದಾಳಿ ನಂತರ ಭಾರತ–ಪಾಕ್ ಗಡಿಯಲ್ಲಿ ಯುದ್ಧ ವಾತಾವರಣ ನಿರ್ಮಾಣವಾಗಿದೆ. ಅದೇ ವೇಳೆ ಭಾರತ–ಮ್ಯಾನ್ಮಾರ್ ಗಡಿಯಲ್ಲಿಯೂ ಪ್ರಕ್ಷುಬ್ಧ ಸ್ಥಿತಿ ಉಂಟಾಗಿದ್ದು, ಬಂಡುಕೋರರನ್ನು ಸದೆಬಡಿಯುವ ಕೆಲಸವನ್ನು ಸೇನೆ ಸದ್ದಿಲ್ಲದೆ ಮಾಡಿದೆ.
ಈಶಾನ್ಯ ರಾಜ್ಯಗಳಲ್ಲಿನ ಮೂಲಸೌಕರ್ಯ ನಾಶಮಾಡಲು ಮ್ಯಾನ್ಮಾರ್‌ನ ಅರಕಾನ್ ಆರ್ಮಿಗೆ ಸೇರಿದ ಬಂಡುಕೋರರ ಯತ್ನಿಸುತ್ತಿದ್ದು, ಅವರ ವಿರುದ್ಧ ಉಭಯ ದೇಶಗಳ ಸೇನೆ ಜಂಟಿ ಕಾರ್ಯಾಚರಣೆ ನಡೆಸಿದೆ.
ಕೋಲ್ಕತ್ತಾ ಬಂದರಿನಿಂದಮ್ಯಾನ್ಮಾರ್‌ನ ಸಿಟ್ವೆ ಬಂದರಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಕಲಾಡನ್ ಬಹು-ಮಾದರಿ ಸಾರಿಗೆ ಯೋಜನೆಯಲ್ಲಿ ಕೆಲಸಮಾಡುತ್ತಿರುವ ಭಾರತೀಯರಿಗೆ ಬಂಡುಕೋರರುಬೆದರಿಕೆ ಹಾಕಿದ್ದು, ಹಣ ನೀಡುವಂತೆ ಪೀಡಿಸಿದ್ದಾರೆ.
ಬಂಡುಕೋರರು ಸಿಡಿಸಿದ ಸುಧಾರಿತ ಸ್ಪೋಟಕಕ್ಕೆ ಮ್ಯಾನ್ಮಾರ್‌ನ ಸೈನಿಕರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದರು.
ಬಂಡುಕೋರರು ಭಾರತದ ಗಡಿ ಪ್ರವೇಶಿಸದಂತೆ ಸೇನೆ ಎಚ್ಚರಿಕೆ ವಹಿಸಿದೆ. ಇದಕ್ಕಾಗಿ ಫೆಬ್ರುವರಿ 17ರಿಂದ ಮಾರ್ಚ್ 2ರವರೆಗೆ ಅಸ್ಸಾಂ ರೈಫಲ್ ಯುನಿಟ್‌ನ 10 ಸಾವಿರ ಸೈನಿಕರನ್ನು ಭಾರತ–ಮ್ಯಾನ್ಮಾರ್ ಗಡಿಯಲ್ಲಿ ನಿಯೋಜಿಸಲಾಗಿದ್ದು, ಬಂಡುಕೋರರ ಶಿಬಿರಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.