ADVERTISEMENT

ದೇಶದ ಶೇ 50ರಷ್ಟು ವಿದ್ಯಾರ್ಥಿಗಳ ಕಲಿಕೆಗೆ 2,500 ವಿ.ವಿ ಅಗತ್ಯ: ಸುಬ್ರಹ್ಮಣ್ಯಂ

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯಂ ಅಭಿಮತ

ಪಿಟಿಐ
Published 16 ನವೆಂಬರ್ 2024, 13:16 IST
Last Updated 16 ನವೆಂಬರ್ 2024, 13:16 IST
<div class="paragraphs"><p>ಬಿವಿಆರ್‌ ಸುಬ್ರಹ್ಮಣ್ಯಂ</p></div>

ಬಿವಿಆರ್‌ ಸುಬ್ರಹ್ಮಣ್ಯಂ

   

–ಪಿಟಿಐ ಚಿತ್ರ

ಹೈದರಾಬಾದ್‌: ‘ದೇಶದ ಶೇಕಡಾ 50ರಷ್ಟು ವಿದ್ಯಾರ್ಥಿಗಳ ಕಲಿಕೆಗೆ ಈಗಿರುವ ವಿಶ್ವವಿದ್ಯಾಲಯಗಳ ಸಂಖ್ಯೆ ದ್ವಿಗುಣಗೊಳಿಸಬೇಕಿದ್ದು, 2,500ಕ್ಕೆ ಹೆಚ್ಚಬೇಕಿದೆ’ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯಂ ತಿಳಿಸಿದರು.

ADVERTISEMENT

ಇಂಡಿಯನ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ (ಐಎಸ್‌ಬಿ)ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ‘ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಪ್ರತಿ ವಾರಕ್ಕೊಂದು ವಿಶ್ವವಿದ್ಯಾಲಯ, ಎರಡು ಕಾಲೇಜುಗಳು ಆರಂಭಗೊಳ್ಳುತ್ತಿವೆ. ಹೀಗಿದ್ದರೂ, ಶೇ 29ರಷ್ಟು ವಿದ್ಯಾರ್ಥಿಗಳು ಮಾತ್ರ ವಿಶ್ವವಿದ್ಯಾಲಯಕ್ಕೆ ದಾಖಲಾಗುತ್ತಿದ್ದಾರೆ’ ಎಂದರು.

‘ಭಾರತವು ಬೃಹತ್‌ ಪ್ರಮಾಣದಲ್ಲಿ ಡಿಜಿಟಲ್‌ ಮೂಲಸೌಕರ್ಯ ಹೊಂದಿದ್ದು, ಡಿಜಿಟಲ್‌ ಜಗತ್ತಿನಲ್ಲಿ ದೇಶವು ಅತ್ಯಂತ ದೊಡ್ಡ ಪ್ರಯೋಗಾಲಯವಾಗುತ್ತಿದೆ’ ಎಂದು ವಿವರಿಸಿದರು.

‘ಈಗ ದೇಶದಲ್ಲಿ 1,200 ವಿಶ್ವವಿದ್ಯಾಲಯಗಳಿದ್ದು, 4ಕೋಟಿಗಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿಶ್ವವಿದ್ಯಾಲಯದ ವ್ಯವಸ್ಥೆಗೆ ಶೇ 29ರಷ್ಟು ವಿದ್ಯಾರ್ಥಿಗಳಿಗೆ ದಾಖಲಾಗುತ್ತಿದ್ದಾರೆ. ನೈಜವಾಗಿ, ಕನಿಷ್ಠ ಶೇಕಡಾ 50ರಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗಬೇಕು’ ಎಂದು ಸುಬ್ರಹ್ಮಣ್ಯಂ ವಿವರಿಸಿದರು.

ದ್ವಿಗುಣವಾಗಲಿ: ‘ದೇಶದಲ್ಲಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ದ್ವಿಗುಣಗೊಳಿಸಬೇಕಿದ್ದು, 2,500 ವಿಶ್ವವಿದ್ಯಾಲಯಗಳ ಅಗತ್ಯವಿದೆ. ಈಗಿರುವ ಕೆಲವು ವಿಶ್ವವಿದ್ಯಾಲಯಗಳ ಗುಣಮಟ್ಟವು ತೃಪ್ತಿಕರವಾಗಿಲ್ಲ. ನಾವು ಶಿಕ್ಷಣವನ್ನು ಭಿನ್ನವಾಗಿ ಕಲಿಸಬೇಕಿದೆ’ ಎಂದು ಸುಬ್ರಹ್ಮಣ್ಯಂ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.