ADVERTISEMENT

ಭಾರತ ಪರಕೀಯರನ್ನು ದ್ವೇಷಿಸಲ್ಲ: ಬೈಡನ್‌ ಹೇಳಿಕೆಗೆ ಜೈಶಂಕರ್‌ ತಿರುಗೇಟು

ಪಿಟಿಐ
Published 4 ಮೇ 2024, 14:34 IST
Last Updated 4 ಮೇ 2024, 14:34 IST
<div class="paragraphs"><p>ಎಸ್‌. ಜೈಶಂಕರ್‌</p></div>

ಎಸ್‌. ಜೈಶಂಕರ್‌

   

ನವದೆಹಲಿ: ಭಾರತವು ಪರಕೀಯರನ್ನು ದ್ವೇಷಿಸುವ ದೇಶವಲ್ಲ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾರತ, ಜಪಾನ್‌, ರಷ್ಯಾ, ಚೀನಾ ದೇಶಗಳು ಪರಕೀಯರನ್ನು ದ್ವೇಷಿಸುವ ದೇಶಗಳಾಗಿವೆ. ಅವು ವಲಸಿಗರನ್ನು ಬಯಸುವುದಿಲ್ಲ. ಹೀಗಾಗಿ ಅವುಗಳು ಆರ್ಥಿಕವಾಗಿ ಹೆಣಗಾಡುತ್ತಿವೆ ಎಂದು ಹೇಳಿದ್ದರು. ಅದಕ್ಕೆ ಭಾರತದ ವಿದೇಶಾಂಗ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

‘ಬೈಡನ್‌ ಅವರ ಹೇಳಿಕೆಗಳು ಭಾರತದ ವಾಸ್ತವಕ್ಕೆ ಹೊಂದಿಕೆ ಆಗುವುದಿಲ್ಲ. ಭಾರತ ಬಹಳ ವಿಶಿಷ್ಟವಾದ ದೇಶ. ವಿಶ್ವದ ಇತಿಹಾಸದಲ್ಲಿ ನಮ್ಮದು ತುಂಬಾ ಮುಕ್ತ ಸಮಾಜ. ವಿವಿಧ ಸಮಾಜಗಳ ವಿಭಿನ್ನ ಜನರು ಭಾರತಕ್ಕೆ ಬಂದಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

‘ಇನ್ನು ನಮ್ಮ ಆರ್ಥಿಕತೆಯೂ ಕುಂಠಿತವಾಗಿಲ್ಲ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.