ADVERTISEMENT

‘ವಿಳಿಂಞ ಬಂದರು ಬೆಂಬಲಿಸಿ ಪ್ರತಿಭಟನೆಗೆ ಅವಕಾಶ ನೀಡಲ್ಲ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 13:58 IST
Last Updated 30 ನವೆಂಬರ್ 2022, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಳಿಂಞ:ಗೌತಮ್‌ ಅದಾನಿ ಸಮೂಹದ ವಿಳಿಂಞ ಬಂದರು ನಿರ್ಮಾಣ ಬೆಂಬಲಿಸಿ ಹಿಂದೂ ಗುಂಪು ಪ್ರತಿಭಟನಾ ರ‍್ಯಾಲಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಕೇರಳ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬಂದರು ನಿರ್ಮಾಣದಿಂದ ಉದ್ಯೋಗ ಸೃಷ್ಟಿಯಾಗುತ್ತದೆಂದು ಹಿಂದೂ ಯುನೈಟೆಡ್‌ ಫ್ರಂಟ್ ಸದಸ್ಯರು ವಿಳಿಂಞ ಬಂದರಿನ ವರೆಗೆ ಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.

‘ಹಿಂದೂ ಯುನೈಟೆಡ್‌ ಫ್ರಂಟ್ ರ‍್ಯಾಲಿಗೆ ಅವಕಾಶ ನಿರಾಕರಿಸಲಾಗಿದೆ. ಆದೇಶ ಉಲ್ಲಂಘಿಸಿದಲ್ಲಿ ರ‍್ಯಾಲಿಯನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮವನ್ನೂ ಕೈಗೊಳ್ಳಲಾಗಿದೆ’ ಎಂದು ತಿರುವನಂತಪುರ ಡಿಸಿಪಿ ಅಜಿತ್ ವಿ. ತಿಳಿಸಿದ್ದಾರೆ.

ADVERTISEMENT

ಬಂದರು ನಿರ್ಮಾಣದಿಂದ ಭೂಸವಕಳಿ ಉಂಟಾಗಿ ತಮ್ಮ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮೀನುಗಾರರು ಆರೋಪಿಸಿ ಪ್ರತಿಭಟಿಸುತ್ತಿರುವುದರಿಂದ ಸುಮಾರು ನಾಲ್ಕು ತಿಂಗಳಿನಿಂದ ಕಾಮಗಾರಿಯು ಸ್ಥಗಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.