ADVERTISEMENT

ದೇಶದಲ್ಲಿ ಮೂರು ತಿಂಗಳಲ್ಲಿ 1,317 H3N2 ಪ್ರಕರಣಗಳು ಪತ್ತೆ

ಪಿಟಿಐ
Published 28 ಮಾರ್ಚ್ 2023, 10:54 IST
Last Updated 28 ಮಾರ್ಚ್ 2023, 10:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘2023ರ ಜನವರಿ 1ರಿಂದ ಮಾರ್ಚ್‌ 21ರವರೆಗೆ ಭಾರತದಲ್ಲಿ 1,317 ಎಚ್‌3ಎನ್‌2 ಪ್ರಕರಣಗಳು ವರದಿಯಾಗಿವೆ’ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ‘ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಪ್ರಕಾರ, ಕಳೆದ ಎರಡು ತಿಂಗಳಲ್ಲಿ ಐಎಲ್‌ಐ (ಇನ್‌ಫ್ಲೂಯೆಂಜಾ ರೀತಿಯ ಕಾಯಿಲೆಗಳು) / ಎಸ್‌ಎಆರ್‌ಐ (ತೀವ್ರ ಉಸಿರಾಟದ ಸೋಂಕುಗಳು) ಕಣ್ಗಾವಲಿನ ಮೂಲಕ ವರದಿಯಾದ 510 ಎಚ್‌3ಎನ್‌2 ಪ್ರಕರಣಗಳಲ್ಲಿ, 19 ರೋಗಿಗಳಿಗೆ ಐಸಿಯುನ ಅಗತ್ಯವಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT