ADVERTISEMENT

ಖಾಲಿಸ್ತಾನಿ ಉಗ್ರ ಅರ್ಷ್‌ ದಲ್ಲಾ ಒಪ್ಪಿಸುವಂತೆ ಭಾರತ ಮನವಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 19:56 IST
Last Updated 14 ನವೆಂಬರ್ 2024, 19:56 IST
<div class="paragraphs"><p>ಕೆನಡಾ ಮತ್ತು ಭಾರತದ ಧ್ವಜ</p></div>

ಕೆನಡಾ ಮತ್ತು ಭಾರತದ ಧ್ವಜ

   

ಐಸ್ಟಾಕ್ ಚಿತ್ರ

ನವದೆಹಲಿ: ’ಖಾಲಿಸ್ತಾನ್ ಟೈಗರ್‌ ಪಡೆ‘ಯ ಅಘೋಷಿತ ಮುಖ್ಯಸ್ಥ ಅರ್ಷದೀಪ್‌ ಸಿಂಗ್ ಗಿಲ್‌ ಅಲಿಯಾಸ್ ಅರ್ಷ್‌ ದಲ್ಲಾನನ್ನು ತನಗೆ ಒಪ್ಪಿಸಬೇಕು ಎಂದು ಭಾರತ ಮತ್ತೆ ಮನವಿ ಮಾಡಲಿದೆ.

ADVERTISEMENT

ಗಿಲ್‌ನನ್ನು ಈಚೆಗೆ ಕೆನಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಭಾರತ ಸಲ್ಲಿಸಿದ್ದ ಮನವಿ ಕೆನಡಾ ಪ್ರಧಾನಿ  ಪರಿಶೀಲನೆಯಲ್ಲಿದೆ. ತನಗೆ ಒಪ್ಪಿಸಲು ಭಾರತ ಕೋರಿರುವ 26 ಆರೋಪಿಗಳಲ್ಲಿ ಈತನೂ
ಒಬ್ಬ. 

ಅರ್ಷ್‌ ದಲ್ಲಾ ವಿರುದ್ಧದ ಕ್ರಿಮಿನಲ್‌ ದಾಖಲೆಗಳು ಹಾಗೂ ಕೆನಡಾದಲ್ಲಿಯೂ ಆತ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಉಲ್ಲೇಖಿಸಿ ಆತನನ್ನು ಒಪ್ಪಿಸಬೇಕು ಎಂದು ಭಾರತ ಕೋರಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್‌ ಅವರು
ಹೇಳಿದ್ದಾರೆ. 

ಅರ್ಷ್‌ ದಲ್ಲಾ ವಿರುದ್ಧ ಕೊಲೆ, ಕೊಲೆಯತ್ನ, ಸುಲಿಗೆ, ಭಯೋತ್ಪಾದನಾ ಚಟುವಟಿಕೆಗಳು, ಉಗ್ರರಿಗೆ ಹಣಕಾಸು ನೆರವು ಸೇರಿದಂತೆ ಸುಮಾರು 50 ಪ್ರಕರಣಗಳು ಇವೆ. ಭಾರತದ ಕೋರಿಕೆ ಆಧರಿಸಿ ಇಂಟರ್‌ಪೋಲ್‌ 2022ರ ಮೇ ತಿಂಗಳು ‘ರೆಡ್ ಕಾರ್ನರ್‌ ನೋಟಿಸ್‌‘ ಕೂಡಾ ಜಾರಿಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.