ADVERTISEMENT

ಕರ್ತಾರ್‌ಪುರ ಕಾರಿಡಾರ್: ಪಾಕ್‌ಗೆ ಸದ್ಯದಲ್ಲೇ ಕರಡು ಒಪ್ಪಂದ ಕಳುಹಿಸಲಿರುವ ಭಾರತ

ಪಿಟಿಐ
Published 6 ಫೆಬ್ರುವರಿ 2019, 1:26 IST
Last Updated 6 ಫೆಬ್ರುವರಿ 2019, 1:26 IST
ಪಾಕಿಸ್ತಾನದ ಕರ್ತಾರಪುರ ಗುರುದ್ವಾರದ ಎದುರು ವಿಶ್ರಾಂತಿ ಪಡೆಯುತ್ತಿದ್ದ ಸಿಖ್‌ ಯಾತ್ರಿಗಳು ಎಎಫ್‌ಪಿ ಚಿತ್ರ
ಪಾಕಿಸ್ತಾನದ ಕರ್ತಾರಪುರ ಗುರುದ್ವಾರದ ಎದುರು ವಿಶ್ರಾಂತಿ ಪಡೆಯುತ್ತಿದ್ದ ಸಿಖ್‌ ಯಾತ್ರಿಗಳು ಎಎಫ್‌ಪಿ ಚಿತ್ರ   

ನವದೆಹಲಿ: ಕರ್ತಾರ್‌ಪುರ ಕಾರಿಡಾರನ್ನು ಸಿಖ್ ಪ್ರವಾಸಿಗರಿಗೆ ಮುಕ್ತಗೊಳಿಸುವ ಸಂಬಂಧ ಸಿದ್ಧಪಡಿಸಿರುವ ಕರಡು ಒಪ್ಪಂದವನ್ನು ಭಾರತವು ಪಾಕಿಸ್ತಾನಕ್ಕೆ ಸದ್ಯದಲ್ಲೇ ಕಳುಹಿಸಲಿದೆ.

ಪಾಕಿಸ್ತಾನದಲ್ಲಿರುವ ಐತಿಹಾಸಿಕ ಸಿಖ್ ಮಂದಿರಕ್ಕೆ ಭಾರತದ ಯಾತ್ರಿಕರು ಕರ್ತಾರ್‌ಪುರ ಕಾರಿಡಾರ್‌ ಮೂಲಕ ಸುಲಭವಾಗಿ ತಲುಪಬಹುದು.

ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸುವ ಮಾರ್ಗೋಪಾಯಗಳ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು.

ADVERTISEMENT

ಕೇಂದ್ರ ಗೃಹಕಾರ್ಯದರ್ಶಿ ರಾಜೀವ್ ಗೌಬಾ, ಪಾಕಿಸ್ತಾನಕ್ಕೆ ಭಾರತದ ರಾಯಭಾರಿಯಾಗಿರುವ ಅಜಯ್ ಬಿಸಾರಿಯಾ ಮತ್ತು ಪಂಜಾಬ್ ಮುಖ್ಯಕಾರ್ಯದರ್ಶಿ ಕರಣ್ ಅವತಾರ್ ಸಿಂಗ್ ಸಭೆಯಲ್ಲಿ ಭಾಗಿಯಾಗಿದ್ದರು. ಹೆದ್ದಾರಿಗಾಗಿ ಭೂಸ್ವಾಧೀನ, ಚೆಕ್‌ಪೋಸ್ಟ್‌ಗಳ ಸ್ಥಾಪನೆ ಬಗ್ಗೆ ಚರ್ಚೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.