ನವದೆಹಲಿ: ಸಂಘರ್ಷಪೀಡಿತ ಲೆಬನಾನ್‌ಗೆ ಭಾರತವು ಮಾನವೀಯ ನೆಲೆಯಲ್ಲಿ ಸಾಮಗ್ರಿಗಳನ್ನು ಕಳುಹಿಸಲು ನಿರ್ಧರಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಚಿತ್ರವನ್ನು ಹಂಚಿದ್ದಾರೆ.
'ಲೆಬನಾನಿಗೆ ಒಟ್ಟು 33 ಟನ್‌ಗಳಷ್ಟು ವೈದ್ಯಕೀಯ ಸಾಮಗ್ರಿ ಕಳುಹಿಸಲಾಗುತ್ತದೆ. ಮೊದಲ ಕಂತಿನ 11 ಟನ್ ವೈದ್ಯಕೀಯ ನೆರವು ಸಾಮಾಗ್ರಿಗಳು ಇಂದು (ಶುಕ್ರವಾರ) ರವಾನೆಯಾಗಲಿದೆ' ಎಂದು ತಿಳಿಸಿದ್ದಾರೆ.
ನೆರವು ಸಾಮಗ್ರಿಯಲ್ಲಿ ಬಹುತೇಕ ಔಷಧೀಯ ಉತ್ಪನ್ನಗಳನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.