ADVERTISEMENT

31 ಪ್ರಿಡೇಟರ್ ಡ್ರೋನ್‌ಗಳ ಖರೀದಿ: ಅಮೆರಿಕದ ಜತೆ ಭಾರತ ಒಪ್ಪಂದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2024, 9:19 IST
Last Updated 15 ಅಕ್ಟೋಬರ್ 2024, 9:19 IST
<div class="paragraphs"><p>‘ಎಂಕ್ಯೂ 9ಬಿ’  ಡ್ರೋನ್‌</p></div>

‘ಎಂಕ್ಯೂ 9ಬಿ’ ಡ್ರೋನ್‌

   

-ಎಎನ್‌ಐ ಚಿತ್ರ

ನವದೆಹಲಿ: ಕಡಲ ಗಡಿಯಲ್ಲಿ ಕಣ್ಗಾವಲಿಡಲು ಬಳಕೆಯಾಗುವ ಶಸ್ತ್ರಸಜ್ಜಿತ ‘ಎಂಕ್ಯೂ 9ಬಿ’ ಹೆಸರಿನ 31 ಡ್ರೋನ್‌ಗಳನ್ನು ಖರೀದಿಸಲು ಅಮೆರಿಕದ ಜತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದನ್ನು ‘ಪ್ರಿಡೇಟರ್‌’ ಎಂದೂ ಕರೆಯಲಾಗುತ್ತದೆ.

ADVERTISEMENT

ನ್ಯಾಟೊ ಸಮೂಹ ಹೊರತುಪಡಿಸಿ ಅಮೆರಿಕದಿಂದ ಇಂತಹ ಶಸ್ತ್ರಾಸ್ತ್ರ ಪಡೆಯುತ್ತಿರುವ ಮೊದಲ ರಾಷ್ಟ್ರ ಭಾರತವಾಗಲಿದೆ. ಈ ವಹಿವಾಟಿನ ಮೊತ್ತ ಸುಮಾರು ₹26 ಸಾವಿರ ಕೋಟಿ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ನಿರ್ಮಿತ 31 ಡ್ರೋನ್‌ಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳಲು ಅಕ್ಟೋಬರ್ 9ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಭದ್ರತೆಯ ಕ್ಯಾಬಿನೆಟ್ ಸಮಿತಿ (ಸಿಸಿಎಸ್‌) ಅನುಮೋದನೆ ನೀಡಿತ್ತು.

ಇದಕ್ಕೂ ಮುನ್ನ 2023ರ ಜೂನ್ 15ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಶಸ್ತ್ರಸಜ್ಜಿತ ‘ಎಂಕ್ಯೂ 9ಬಿ’ ಹೆಸರಿನ 30 ಡ್ರೋನ್ ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.