ADVERTISEMENT

ಟ್ರಸ್ಟ್‌ಗೆ ಕರ್ತಾರ್‌ಪುರ ಸಾಹಿಬ್‌ ಗುರುದ್ವಾರ ಆಡಳಿತ ವರ್ಗ: ಭಾರತದ ವಿರೋಧ

ಪಿಟಿಐ
Published 5 ನವೆಂಬರ್ 2020, 16:45 IST
Last Updated 5 ನವೆಂಬರ್ 2020, 16:45 IST
ಕರ್ತಾರ್‌ಪುರ ಸಾಹಿಬ್‌ ಗುರುದ್ವಾರ
ಕರ್ತಾರ್‌ಪುರ ಸಾಹಿಬ್‌ ಗುರುದ್ವಾರ   

ನವದೆಹಲಿ: ಕರ್ತಾರ್‌‍ಪುರ ಸಾಹಿಬ್‌ ಗುರುದ್ವಾರದ ಆಡಳಿತವನ್ನು ಸಿಖ್‌ ಸಮುದಾಯದ ಸಮಿತಿಯೊಂದರಿಂದ ಕಿತ್ತುಕೊಂಡು ಟ್ರಸ್ಟ್‌ ಒಂದಕ್ಕೆ ವರ್ಗಾವಣೆ ಮಾಡುವ ಪಾಕಿಸ್ತಾನದ ನಿರ್ಧಾರವನ್ನು ಭಾರತವು ಗುರುವಾರ ಖಂಡಿಸಿದೆ.

‘ಈ ನಿರ್ಧಾರವು ಸಿಖ್‌ ಸಮುದಾಯದ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿದೆ’ ಎಂದು ಭಾರತವು ಟೀಕಿಸಿದೆ. ಪಾಕಿಸ್ತಾನ್‌ ಸಿಖ್‌ ಗುರುದ್ವಾರ ಪ್ರಬಂಧಕ್‌ ಸಮಿತಿಯ ಬಳಿ ಇದ್ದ ಆಡಳಿತದ ಅಧಿಕಾರವನ್ನು ಸಿಖ್‌ ಸಮುದಯವನ್ನು ಪ್ರತಿನಿಧಿಸದ ಇವ್ಯಾಕ್ಯೂ ಟ್ರಸ್ಟ್‌ ಪ್ರಾಪರ್ಟಿ ಮಂಡಳಿಗೆ ವರ್ಗಾಯಿಸುವ ನಿರ್ಧಾರವನ್ನು ವಿರೋಧಿಸಿ ಸಿಖ್‌ ಸಮುದಾಯವು ಭಾರತಕ್ಕೆ ಮನವಿ ಸಲ್ಲಿಸಿದೆ ಎಂದು ವಿದೇಶಾಂಗ ಇಲಾಖೆಯು ತಿಳಿಸಿದೆ.

ಸಿಖ್‌ ಧರ್ಮ ಸ್ಥಾಪಕ ಗುರುನಾನಕ್‌ ಅವರು ಕೊನೆಯ ದಿನಗಳನ್ನು ಕಳೆದ ಕರ್ತಾರ್‌ಪುರವು, ಪಾಕಿಸ್ತಾನದ ಭೂಪ್ರದೇಶದಲ್ಲಿದೆ. ಕರ್ತಾರ್‌ಪುರ ಸಾಹಿಬ್‌ ಗುರುದ್ವಾರವು, ಭಾರತದ ಗಡಿಯಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿದ್ದು, ಇಲ್ಲಿಗೆ ಹೋಗಲು ಕಳೆದ ನವೆಂಬರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟಿಸಿದ್ದವು.

ADVERTISEMENT

‘ಪಾಕಿಸ್ತಾನದ ಈ ಏಕಪಕ್ಷೀಯವಾದ ನಿರ್ಧಾರವು ಖಂಡನೀಯ. ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣದ ಹಿಂದಿನ ಉದ್ದೇಶಕ್ಕೂ ಈ ನಿರ್ಧಾರ ವಿರುದ್ಧವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.