ನವದೆಹಲಿ: ‘ಅಂತರರಾಷ್ಟ್ರೀಯ ಕಾನೂನಿನ ಪರಿಧಿಯಲ್ಲಿಯೇ ಶಾಂತಿಯುತವಾಗಿ ಸಮುದ್ರದ ಗಡಿ ವಿವಾದಗಳ ಇತ್ಯರ್ಥಕ್ಕೆ ಭಾರತ ಬದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರ ಭಾಗ, ತೈವಾನ್ ಜಲಸಂಧಿಯಲ್ಲಿ ಚೀನಾವು ತನ್ನ ಸೇನಾ ಬಲವನ್ನು ವೃದ್ಧಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಪತ್ರಿಕೆ ‘ಯೊಮಿಯುರಿ ಶಿಂಬುನ್’ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಬಾಂಗ್ಲಾದೇಶ ಜೊತೆಗಿನ ಸಮುದ್ರದ ಗಡಿ ವಿವಾದವನ್ನು ಭಾರತ ಈಗಾಗಲೇ ಯಶಸ್ವಿಯಾಗಿ ಬಗೆಹರಿಸಿಕೊಂಡಿದೆ’ ಎಂದರು.
‘ಜಾಗತಿಕ ಸಹಕಾರಕ್ಕೆ ಜಿ7 ಮತ್ತು ಜಿ20 ಶೃಂಗ ಸಭೆಗಳ ಪಾತ್ರ ನಿರ್ಣಾಯಕ. ಹವಾಮಾನ ವೈಪರೀತ್ಯ, ಆರ್ಥಿಕ ಚೇತರಿಕೆ, ಆರೋಗ್ಯ, ಆಹಾರ ಭದ್ರತೆ ಸೇರಿದಂತೆ ಶಾಂತಿ, ಸುರಕ್ಷತೆ ಕಾಪಾಡಲು ಈ ಸಭೆಗಳ ಪಾತ್ರ ಮಹತ್ವಪೂರ್ಣವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.