ನವದೆಹಲಿ: ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಭೇಟಿಗೆ ಚೀನಾದ ಆಕ್ಷೇಪವನ್ನು ಮಂಗಳವಾರ ಬಲವಾಗಿ ತಿರಸ್ಕರಿಸಿರುವ ಭಾರತ, ಅರುಣಾಚಲ ಪ್ರದೇಶ ರಾಜ್ಯವು ಯಾವಾಗಲೂ ಭಾರತದ ಅವಿಭಾಜ್ಯಗಿಯೇ ಇರಲಿದೆ ಎಂದು ಪ್ರತಿಪಾದಿಸಿದೆ.
ಅರುಣಾಚಲ ಪ್ರದೇಶಕ್ಕೆ ಭಾರತೀಯ ನಾಯಕರ ಭೇಟಿಯನ್ನು ಆಕ್ಷೇಪಿಸುವುದು ಅಥವಾ ಅಲ್ಲಿ ಭಾರತದ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
;ಪ್ರಧಾನಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಕುರಿತು ಚೀನಾದ ಕಡೆಯಿಂದ ಬಂದಿರುವ ಆಕ್ಷೇಪಗಳನ್ನು ತಿರಸ್ಕರಿಸುತ್ತೇವೆ’ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಮೋದಿಯವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕಾಗಿ ಭಾರತಕ್ಕೆ ರಾಜತಾಂತ್ರಿಕ ಪ್ರತಿಭಟನೆಯನ್ನು ಸಲ್ಲಿಸಿರುವುದಾಗಿ ಚೀನಾ ಸೋಮವಾರ ಹೇಳಿತ್ತು. ಭಾರತದ ನಡೆ ಬಗೆಹರಿಯದ ಗಡಿ ಪ್ರಶ್ನೆಯನ್ನು ಸಂಕೀರ್ಣಗೊಳಿಸುತ್ತವೆ ಎಂದು ಹೇಳುವ ಮೂಲಕ ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕನ್ನು ಪುನರುಚ್ಚರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.