ADVERTISEMENT

ಸ್ವದೇಶಿ ನಿರ್ಮಿತ RudraM-II ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆ ಯಶಸ್ವಿ

ಪಿಟಿಐ
Published 29 ಮೇ 2024, 13:57 IST
Last Updated 29 ಮೇ 2024, 13:57 IST
<div class="paragraphs"><p>ಸುಖೋಯ್‌–30ಎಂಕೆ–1 ಯುದ್ಧವಿಮಾನದಿಂದ ‘ರುದ್ರ ಎಂ–2’ ಕ್ಷಿಪಣಿಯ ಪರೀಕ್ಷೆಯನ್ನು ಬುಧವಾರ ಯಶಸ್ವಿಯಾಗಿ ನೆರವೇರಿಸಲಾಯಿತು – </p></div>

ಸುಖೋಯ್‌–30ಎಂಕೆ–1 ಯುದ್ಧವಿಮಾನದಿಂದ ‘ರುದ್ರ ಎಂ–2’ ಕ್ಷಿಪಣಿಯ ಪರೀಕ್ಷೆಯನ್ನು ಬುಧವಾರ ಯಶಸ್ವಿಯಾಗಿ ನೆರವೇರಿಸಲಾಯಿತು –

   

ಪಿಟಿಐ ಚಿತ್ರ 

ಬಾಲೇಶ್ವರ(ಒಡಿಶಾ): ಭಾರತವು ಬುಧವಾರ ಒಡಿಶಾ ಕರಾವಳಿಯಲ್ಲಿ RudraM-II ಏರ್ ಟು ಸರ್ಫೇಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಪ್ರಯೋಗದ ಎಲ್ಲ ಉದ್ದೇಶಗಳನ್ನು ಕ್ಷಿಪಣಿ ಪೂರ್ಣಗೊಳಿಸಿದ್ದು, ಪ್ರೊಪಲ್ಷನ್ ಸಿಸ್ಟಂ ಮತ್ತು ಕಂಟ್ರೋಲ್ ಹಾಗೂ ಗೈಡೆನ್ಸ್ ಅಲಗಾರಿದಂ ಅನ್ನು ಪೂರೈಸಿದೆ ಎಂದು ಅದು ಹೇಳಿದೆ. ಎಲ್ಲ ಗುರಿಗಳನ್ನು ನಿಖರವಾಗಿ ಮುಟ್ಟುವ ಮೂಲಕ ಕ್ಷಿಪಣಿ ಸಾಮರ್ಥ್ಯವನ್ನು ಸಾಬೀತು ಮಾಡಿದೆ.

RudraM-II ಕ್ಷಿಪಣಿಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಸಾಲಿಡ್ ಪ್ರೊಪೆಲ್ಡ್ ಏರ್ ಲಾಂಚ್ಡ್ ಮಿಸೈಲ್ ವ್ಯವಸ್ಥೆಯಾಗಿದೆ. ಅಂದರೆ, ಏರ್ ಟು ಸರ್ಫೇಸ್‌ವರೆಗೆ ವಿವಿಧ ಕಡೆಗಳಿಂದ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

ಭಾರತೀಯ ವಾಯುಪಡೆಯ ಎಸ್‌ಯು–30 ಎಂಕೆ–ಐ ಯುದ್ಧ ವಿಮಾನದ ಮೂಲಕ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ.

ಫ್ಲೈಟ್‌ನ ಎಲೆಕ್ಟ್ರೋ ಆಪ್ಟಿಕಲ್ ಸಿಸ್ಟಂ, ರಾಡಾರ್ ಮತ್ತು ಟೆಲಿಮೀಟ್ರಿ ಸ್ಟೇಷನ್‌ಗಳು, ಹಡಗುಗಳ ಮೂಲಕ ಕ್ಷಿಪಣಿ ಸಾಮರ್ಥ್ಯವನ್ನು ಪತ್ತೆ ಮಾಡಲಾಗಿದೆ.

ಡಿಆರ್‌ಡಿಒ ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ , ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಹಲವು ಸಾಧನಗಳನ್ನು ಈ ಕ್ಷಿಪಣಿ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. RudraM-II ಯಶಸ್ವಿ ಉಡಾವಣೆ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ ಮತ್ತು ವಾಯುಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕ್ಷಿಪಣಿಯನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಯುದ್ಧವಿಮಾನಗಳಿಂದ ಉಡ್ಡಯನ ಮಾಡಬಹುದಾದ ಈ ಕ್ಷಿಪಣಿ ವ್ಯವಸ್ಥೆಯನ್ನು, ಭೂಮಿ ಮೇಲಿರುವ ಶತ್ರು ಪಾಳಯದ ಹಲವು ಬಗೆಯ ಸ್ವತ್ತುಗಳನ್ನು ನಾಶ ಮಾಡುವ ಉದ್ದೇಶದಿಂದಲೇ ಅಭಿವೃದ್ಧಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.