ನವದೆಹಲಿ (ಪಿಟಿಐ): ಇಂದಿನ ಯುದ್ಧ ಯುಗದಲ್ಲಿ ಶಾಂತಿಯುತ ಮತ್ತು ಸ್ನೇಹಪರ ಸಂಬಂಧಕ್ಕೆ ಭಾರತ ಮತ್ತು ಸ್ವಿಟ್ಜರ್‌ಲೆಂಡ್ ನಡುವಿನ ಬಾಂಧವ್ಯ ನಿದರ್ಶನವಾಗಿದೆ ಎಂದು ಸ್ವಿಟ್ಜರ್‌ಲೆಂಡ್ ರಾಯಭಾರಿ ರಾಲ್ಫ್ ಹೆಕ್ನರ್ ಹೇಳಿದ್ದಾರೆ.
ಉಭಯ ದೇಶಗಳ ನಡುವಿನ 75 ವರ್ಷಗಳ ಸ್ನೇಹಪರ ಬಾಂಧವ್ಯದ ಪ್ರತೀಕವಾಗಿ ನವದೆಹಲಿಯ ಸ್ವಿಟ್ಜರ್‌ಲೆಂಡ್ ರಾಯಭಾರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉಭಯ ದೇಶಗಳ ನಡುವಿನ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಿದೆ ಎಂದರು.
75 ವರ್ಷಗಳ ಹಿಂದೆ ಭಾರತ ಮತ್ತು ಸ್ವಿಟ್ಜರ್‌ಲೆಂಡ್ ಸ್ನೇಹ ಮತ್ತು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದವು. ಸ್ವಾತಂತ್ರ್ಯಲಭಿಸಿದ ನಂತರ ಈ ಒಪ್ಪಂದಕ್ಕೆ ಸಹಿ ಹಾಕುವ ಮೊದಲ ದೇಶವಾಗಿ ಸ್ವಿಟ್ಜರ್‌ಲೆಂಡ್ ಅನ್ನು ಭಾರತ ಆಯ್ಕೆ ಮಾಡಿಕೊಂಡಿತ್ತು.
ಕಾರ್ಯಕ್ರಮದ ಅಂಗವಾಗಿ ರಾಯಭಾರ ಕಚೇರಿಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.