ನವದೆಹಲಿ: ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 8ರಿಂದ 18ರ ವರೆಗೆ ಮಲಬಾರ್ ಸಮರಾಭ್ಯಾಸ ನಡೆಯಲಿದೆ. ಭಾರತದೊಂದಿಗೆ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ನೌಕಾಪಡೆಗಳು ಪಾಲ್ಗೊಳ್ಳಲಿವೆ.
'ಮಲಬಾರ್ ಸಮಾರಾಭ್ಯಾಸ – 2024 ಅಕ್ಟೋಬರ್ 8 ರಿಂದ 18ರ ವರೆಗೆ ನಿಗದಿಯಾಗಿದೆ. ಇದು ವಿಶಾಖಪಟ್ಟಣಂ ಬಂದರು ಪ್ರದೇಶದಿಂದ ಆರಂಭವಾಗಲಿದೆ' ಎಂದು ಭಾರತೀಯ ನೌಕಾಪಡೆ ಶನಿವಾರ ಪ್ರಕಟಿಸಿದೆ.
ಭಾರತ ಮತ್ತು ಅಮೆರಿಕ ನೌಕಾಪಡೆಗಳ ದ್ವಿಪಕ್ಷೀಯ ತಾಲೀಮಿನ ಭಾಗವಾಗಿ ಮಲಬಾರ್ ಸಮಾರಾಭ್ಯಾಸ 1992ರಲ್ಲಿ ಆರಂಭವಾಯಿತು. ನಂತರದ ವರ್ಷಗಳಲ್ಲಿ, ಪರಸ್ಪರ ಕಾರ್ಯಕ್ಷಮತೆ, ಪ್ರೋತ್ಸಾಹ ಮತ್ತು ಹಿಂದೂ ಮಹಾಸಾಗರ, ಪೆಸಿಫಿಕ್ ಪ್ರದೇಶದಲ್ಲಿ ಎದುರಾಗುವ ಸಾಗರೋತ್ತರ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಬಹುರಾಷ್ಟ್ರೀಯ ಕಾರ್ಯಕ್ರಮವಾಗಿ ಮಾರ್ಪಾಡಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.