ADVERTISEMENT

ಹಿಂದೂಮಹಾಸಾಗರದಲ್ಲಿ ಭಾರತ–ಅಮೆರಿಕ ನೌಕಾಪಡೆಗಳ ತಾಲೀಮು

ಪಿಟಿಐ
Published 15 ಜುಲೈ 2024, 14:05 IST
Last Updated 15 ಜುಲೈ 2024, 14:05 IST
   

ನವದೆಹಲಿ: ಭಾರತ ನೌಕಾಪಡೆಯ ಯುದ್ಧನೌಕೆಗಳು ಮತ್ತು ಅಮೆರಿಕ ನೌಕಾಪಡೆಯು ಥಿಯೊಡೋರ್‌ ರೂಸ್‌ವೆಲ್ಟ್‌ ಯುದ್ಧನೌಕೆಯು ಹಿಂದೂಮಹಾಸಾಗರದಲ್ಲಿ ಸೇನಾ ತಾಲೀಮು ನಡೆಸಿದವು.

ಥಿಯೊಡೋರ್‌ ರೂಸ್‌ವೆಲ್ಟ್‌, ಅಮೆರಿಕ ನೌಕಾಪಡೆಯ ಪರಮಾಣು ಚಾಲಿತ ಯುದ್ಧನೌಕೆಗಳಲ್ಲಿ ಒಂದು.

‘ಥಿಯೊಡೋರ್‌ ರೂಸ್‌ವೆಲ್ಟ್‌ ಹಾಗೂ ಭಾರತೀಯ ನೌಕಾಪಡೆಗಳು ಜುಲೈ 12ರಂದು ಹಿಂದೂ ಮಹಾಸಾಗರದಲ್ಲಿ ಸಮರಾಭ್ಯಾಸ ನಡೆಸಿದವು’ ಎಂದು ಅಮೆರಿಕ ರಾಯಭಾರ ಕಚೇರಿ ಹೇಳಿದೆ.

ADVERTISEMENT

ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಹಸ್ತಕ್ಷೇಪ ಹೆಚ್ಚುತ್ತಿರುವ ಬೆನ್ನಲ್ಲೇ ಉಭಯ ದೇಶಗಳು ಸೇನಾ ತಾಲೀಮು ನಡೆಸಿವೆ.

ತಾಲೀಮಿನಲ್ಲಿ ಕ್ಷಿಪಣಿ ವಿನಾಶಕಗಳಾದ ಐಎನ್‌ಎಸ್‌ ವಿಶಾಖಪಟ್ಟಣಂ ಮತ್ತು ಐಎನ್‌ಎಸ್‌ ಆದಿತ್ಯ ಭಾಗಿಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.