ADVERTISEMENT

ಗಡಿಯಲ್ಲಿ ಚೀನಾ ಸೇನೆ ವಾಪಸ್ ಹೋಗದೆ ನಮ್ಮ ಸೇನೆ ಹಿಂತೆಗೆತ ಇಲ್ಲ: ಭಾರತ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 3:50 IST
Last Updated 11 ಫೆಬ್ರುವರಿ 2021, 3:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೇನಾ ನಿಯೋಜನೆ ಹಿಂತೆಗೆದುಕೊಳ್ಳದೆ, ಭಾರತ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಿಲ್ಲ ಎಂದು ಸೇನೆ ಹೇಳಿದೆ. ಲಡಾಖ್‌ನಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿಸಮಸ್ಯೆ ಸೃಷ್ಟಿಯಾದ ಬಳಿಕ ಸೇನೆ ನಿಯೋಜಿಸಲಾಗಿತ್ತು.

ಪ್ಯಾಂಗಾಂಗ್ ತೀರದಲ್ಲಿ ಭಾರತ ಮತ್ತು ಚೀನಾದ ಸೈನ್ಯ ಬೀಡುಬಿಟ್ಟಿದ್ದು, ಕಳೆದ 10 ತಿಂಗಳಿನಿಂದ ಇದೇ ಪರಿಸ್ಥಿತಿಯಿದೆ. ಮಾತುಕತೆಯ ಮೂಲಕ ಸೇನಾಪಡೆ ಹಂತಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ರಾಷ್ಟ್ರಗಳು ಮುಂದಾಗಿದ್ದರೂ, ಪೂರ್ತಿಯಾಗಿ ಸೇನೆ ವಾಪಸ್ ಆಗಿಲ್ಲ. ಹೀಗಾಗಿ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ಬಳಿಕವಷ್ಟೇ ಭಾರತ ಕೂಡ ಸೇನಾಪಡೆಯನ್ನು ವಾಪಸ್ ಕಳುಹಿಸಲಿದೆ ಎಂದು ಹೇಳಿದೆ.

ನವದೆಹಲಿ ಮತ್ತು ಬೀಜಿಂಗ್ ನಡುವಣ ಮಾತುಕತೆ ಕುರಿತು ವಿವರ ನೀಡಿರುವ ಮೂಲಗಳು, ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು. ಹೀಗಾಗಿ ಅಷ್ಟರವರೆಗೆ ಗಡಿಯಲ್ಲಿ ಸೇನೆ ಸನ್ನದ್ಧ ಸ್ಥಿತಿಯಲ್ಲೇ ಇರಲಿದೆ ಎಂದು ಹೇಳಿವೆ.

ADVERTISEMENT

ಚೀನಾ ಮತ್ತು ಭಾರತದ ಕಡೆಯಿಂದ ಗಡಿಯಲ್ಲಿ ಸೇನೆ ಹಿಂತೆಗೆತವನ್ನು ಪರಿಶೀಲಿಸಿ ದೃಢಪಡಿಸಲಾಗುತ್ತದೆ. ಜತೆಗೆ ಗಡಿನಿಯಂತ್ರಣ ರೇಖೆಯ ದೆಪ್ಸಾಂಗ್ ವೈ ಮತ್ತು ಗೋಗ್ರಾ ಪೋಸ್ಟ್ ಪ್ರದೇಶಗಳಲ್ಲಿ ಕೂಡ ಮುಂದಿನ ದಿನಗಳಲ್ಲಿ ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಇದೇ ಪ್ರಕ್ರಿಯೆ ಅನುಸರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.