ADVERTISEMENT

ದೇಶದ ಅಭಿವೃದ್ಧಿಗೆ ಗಡಿ ಸುರಕ್ಷತೆಯೇ ಮೆಟ್ಟಿಲು: ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌

ಪಿಟಿಐ
Published 24 ಮೇ 2024, 15:39 IST
Last Updated 24 ಮೇ 2024, 15:39 IST
ಅಜಿತ್ ಡೊಭಾಲ್
ಅಜಿತ್ ಡೊಭಾಲ್   

ನವದೆಹಲಿ: ಭಾರತದ ಗಡಿಗಳು ಸುರಕ್ಷಿತವಾಗಿದ್ದರೆ, ದೇಶವು ಮತ್ತಷ್ಟು ವೇಗವಾಗಿ ಅಭಿವೃದ್ಧಿಯಾಗಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಪ್ರತಿಪಾದಿಸಿದ್ದಾರೆ. ಅಲ್ಲದೆ, ಕಳೆದ 10 ವರ್ಷಗಳಲ್ಲಿ ದೇಶದ ಸಾಮರ್ಥ್ಯವು ಗಣನೀಯವಾಗಿ ವೃದ್ಧಿಯಾಗಿದೆ ಎಂದು ಹೇಳಿದ್ದಾರೆ. 

ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಗಡಿಗಳು ಮತ್ತಷ್ಟು ಸುರಕ್ಷಿತವಾಗಿದ್ದರೆ, ಭಾರತದ ಆರ್ಥಿಕತೆಯು ಮತ್ತಷ್ಟು ವೇಗವಾಗಿ ಬೆಳೆಯುತ್ತಿತ್ತು’ ಎಂದು ಹೇಳಿದರು. 

‘ಗಡಿ ಪಡೆಗಳ ಮೇಲಿನ ಜವಾಬ್ದಾರಿ ಹೆಚ್ಚುತ್ತಿದೆ. ಅವರು ಗಡಿಯನ್ನು ನಿರಂತರ 24 ಗಂಟೆಯೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ನಮ್ಮ ರಾಷ್ಟ್ರೀಯ ಹಿತಾಸಕ್ತಿ ಮತ್ತು ದೇಶದ ರಕ್ಷಣೆ ಮೇಲೆ ನಿಗಾ ವಹಿಸಬೇಕಾಗಿದೆ. ಗಡಿಗಳು ದೇಶದ ಸಾರ್ವಭೌಮತ್ವದ ವ್ಯಾಖ್ಯಾನವಾಗಿರುವುದರಿಂದಾಗಿ ಅವುಗಳ ರಕ್ಷಣೆಯು ತುಂಬಾ ಮುಖ್ಯ’ ಎಂದರು.  

ADVERTISEMENT

ಕಳೆದ 10 ವರ್ಷಗಳಲ್ಲಿ ಸರ್ಕಾರವು ಗಡಿ ಭದ್ರತೆಗೆ ಹೆಚ್ಚಿನ ಒತ್ತು ನೀಡಿದ್ದರಿಂದಾಗಿ, ನಮ್ಮ ದೇಶದ ಸಾಮರ್ಥ್ಯವು ಹೆಚ್ಚು ವೃದ್ಧಿಯಾಗಿದೆ. ಭಾರತವು ಅತಿ ವೇಗವಾಗಿ ಬದಲಾವಣೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ನಾವು ಹೊರಹೊಮ್ಮಲಿದ್ದೇವೆ. ಆ ಮೂಲಕ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಲಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.