ADVERTISEMENT

ಪಾಕ್‍ ವಿರುದ್ಧ ವೈಮಾನಿಕ ದಾಳಿ ನಡೆಸಿದ ಐಎಎಫ್‍ಗೆ ಟ್ವೀಟ್ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 5:52 IST
Last Updated 26 ಫೆಬ್ರುವರಿ 2019, 5:52 IST
   

ನವದೆಹಲಿ: ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಭಾರತೀಯ ವಾಯು ಪಡೆ (ಐಎಎಫ್)ಗೆ ರಾಜಕೀಯ ಮುಖಂಡರು, ಸಚಿವರು ಟ್ವಿಟರ್‌ನಲ್ಲಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದ ವಾಯು ಪಡೆಯ ಪೈಲಟ್‍ಗಳು ನಮ್ಮ ಹೆಮ್ಮೆ, ಅವರಿಗೆ ನನ್ನ ಸೆಲ್ಯೂಟ್ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಐಎಎಫ್ ಪೈಲಟ್‍ಗಳಿಗೆ ಸಲ್ಯೂಟ್ -ರಾಹುಲ್ ಗಾಂಧಿ

ADVERTISEMENT

ನಿಯಂತ್ರಣ ಗಡಿ ರೇಖೆಯಾಚೆ ಕಾರ್ಯಾಚರಣೆ ನಡೆಸಿದ ವಾಯುಪಡೆಗೆ ಅಭಿನಂದನೆಗಳು -ಯಶವಂತ್ ಸಿನ್ಹಾ

ವಾಯುಸೇನೆಗೆ ನಮನ- ರಣದೀಪ್ ಸಿಂಗ್ ಸುರ್ಜೇವಾಲ

ಭಾರತೀಯ ವಾಯುಸೇನೆ ಶೌರ್ಯ ಪ್ರದರ್ಶಿಸಿತು, ಮೋದಿ ಇದ್ದರೆ ಎಲ್ಲ ಸಾಧ್ಯ : ಸಿದ್ದಾರ್ಥ್ ನಾಥ್ ಸಿಂಗ್

ಇದು ಮೋದಿಯವರ ಹಿಂದೂಸ್ತಾನ, ಮನೆಗೆ ನುಗ್ಗುತ್ತೇವೆ, ಮತ್ತಷ್ಟು ದಾಳಿ ಮಾಡುತ್ತೇವೆ: ಗಜೇಂದ್ರ ಸಿಂಗ್ ಶೆಖಾವತ್

ನೀವು ಒಂದು ಕೆನ್ನೆಗೆ ಹೊಡೆದರೆ ನಾವು ಇನ್ನೊಂದು ಕೆನ್ನೆ ತೋರಿಸುವುದಿಲ್ಲ. ಅದರ ಬದಲು ನಿಮ್ಮ ಕಾಲರ್ ಹಿಡಿದು ಸರಿಯಾಗಿ ಹೊಡೆಯುತ್ತೇವೆ.ಮತ್ತೆ ಎಂದಿಗೂ ನೀವು ಈ ರೀತಿಯಕೃತ್ಯಕ್ಕೆ ಕೈಹಾಕುವ ಸಾಹಸ ಮಾಡಬಾರದು: ಚೇತನ್ ಭಗತ್

ಐಎಎಫ್ ಮುಜಾಫರಾಬಾದ್ ಪ್ರದೇಶಕ್ಕೆ ನುಗ್ಗಿ ಬಲಾಕೋಟ್‍ನಲ್ಲಿ ದಾಳಿ ಮಾಡಿದೆ. ಈಗ ಜೋಶ್ ಹೇಗಿದೆ?:ಶೋಭಾ ಕರಂದ್ಲಾಜೆ

ಶಶಿ ತರೂರ್ ಟ್ವೀಟ್

ಭಾರತೀಯ ವಾಯುಸೇನೆಗೆ ಸಲ್ಯೂಟ್, ಅಭಿನಂದನೆಗಳು

ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿ ನಮ್ಮ ತಂಡ ಸುರಕ್ಷಿತವಾಗಿ ವಾಪಸ್ ಆಗಿದೆ. ಈ ಹೀರೊಗಳ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ: ಕಮಲ್ ಹಾಸನ್

ಜೈಷೆ ಉಗ್ರರ ಮೇಲೆ ದಾಳಿ ನಡೆಸಿದ ಯೋಧರಿಗೆ ನಮನಗಳು. ಈ ಹಿಂದೆಯೇ ಸೇನೆಗೆ ಈ ರೀತಿಯ ಸರ್ವಾಧಿಕಾರವನ್ನು ಬಿಜೆಪಿ ನೀಡಬೇಕಿತ್ತು: ಮಾಯಾವತಿ

जैश आतंकियों आदि के खिलाफ पीओके में घुसकर भारतीय वायुसेना के बहादुर जाँबाज़ों की साहसिक कार्रवाई को सलाम व सम्मान। काश हमारी सेना को फ्री हैण्ड बीजेपी की सरकार पहले दे देती तो बेहतर होता।

ಭಾರತೀಯ ವಾಯು ಸೇನೆಗೆ ನನ್ನ ನಮನಗಳು: ಕುಮಾರಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.