ನವದೆಹಲಿ: ತಾಂತ್ರಿಕ ದೋಷದಿಂದಾಗಿ ಭಾರತೀಯ ವಾಯುಪಡೆಯ (ಐಎಎಫ್) ಚಿನೂಕ್ ಹೆಲಿಕಾಪ್ಟರ್ ಪಂಜಾಬ್‌ನ ಬರ್ನಾಲಾ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳನ್ನು ಸೇನಾಧಿಕಾರಿಗಳು ಬಹಿರಂಗಪಡಿಸಿಲ್ಲ.
ಅಮೆರಿಕ ಮೂಲದ ಬೋಯಿಂಗ್ ಸಂಸ್ಥೆ ತಯಾರಿಸಿರುವ ‘ಚಿನೂಕ್ ಹೆಲಿಕಾಪ್ಟರ್’ಗಳನ್ನು ಸೇನಾ ತುಕಡಿಗಳು, ಆರ್ಟಿಲರಿ, ಸಲಕರಣೆ ಹಾಗೂ ಇಂಧನವನ್ನು ಕ್ಷಿಪ್ರವಾಗಿ ಸಾಗಣೆ ಮಾಡಲು ಬಳಸಲಾಗುತ್ತದೆ. ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಪರಿಹಾರ ಕಾರ್ಯಕೈಗೊಳ್ಳಲು, ಪರಿಹಾರ ಸಾಮಗ್ರಿಗಳ ಪೂರೈಕೆ ಹಾಗೂ ಬೃಹತ್ ಸಂಖ್ಯೆಯಲ್ಲಿರುವ ನಿರಾಶ್ರಿತರನ್ನು ಬೇರೆಡೆ ಸ್ಥಳಾಂತರಿಸಲು ಸಹ ಬಳಕೆ ಮಾಡಲಾಗುತ್ತದೆ.
ಅಮೆರಿಕದಿಂದ 22 ‘ಅಪಾಚೆ’ ಮತ್ತು 15 ‘ಚಿನೂಕ್’ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭಾರತ 2015ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.