ADVERTISEMENT

ಭಾರತೀಯ ವಾಯುಪಡೆಯ 86ನೇ ಸಂಸ್ಥಾಪನಾ ದಿನ: ಯೋಧರ ಅನುಪಮ ಸೇವೆಯ ಗುಣಗಾನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 10:46 IST
Last Updated 8 ಅಕ್ಟೋಬರ್ 2018, 10:46 IST
   

ಗಾಜಿಯಾಬಾದ್‌:ಭಾರತೀಯ ವಾಯುಪಡೆ ತನ್ನ 86ನೇ ಸಂಸ್ಥಾಪನಾ ದಿನವನ್ನು ಇಂದು(ಸೋಮವಾರ) ಆಚರಿಸುತ್ತಿದೆ.

ಸಂಸ್ಥಾಪನಾ ದಿನದ ಅಂಗವಾಗಿ ಗಾಜಿಯಾಬಾದ್‌ನಲ್ಲಿನ ಹಿಂದನ್ ವಾಯುನೆಲೆಯಲ್ಲಿ ವಾಯುಪಡೆಯಿಂದ ಆಕರ್ಷಕ ಪಥ ಸಂಚಲನ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ವಾಯುಪಡೆಯು ರಾಷ್ಟ್ರ ರಕ್ಷಣೆಗೆ ನೀಡಿದ ಕೊಡುಗೆ ಹಾಗೂ ವಿಪತ್ತು ಮತ್ತು ತುರ್ತು ಸಂದರ್ಭಗಳಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ರಾಷ್ಟ್ರಪತಿ, ಪ್ರಧಾನಿ, ಕೇರಳ ಸಿಎಂ ಸೇರಿದಂತೆ ಗಣ್ಯರು ಸ್ಮರಿಸಿದ್ದಾರೆ.

ADVERTISEMENT

ವಾಯುಪಡೆ ಯೋಧರಿಗೆ ಹೆಮ್ಮೆಯಿಂದ ಗೌರವಿಸುವೆ: ರಾಷ್ಟ್ರಪತಿ
ವಾಯುಪಡೆಯ ದಿನದಂದು ನಮ್ಮ ವಾಯುಪಡೆಯ ಯೋಧರು, ಪರಿಣತರು ಮತ್ತು ಅವರ ಕುಟುಂಬಗಳನ್ನು ನಾವು ಹೆಮ್ಮೆಯಿಂದ ಗೌರವಿಸುತ್ತೇವೆ. ದೈರ್ಯ ಮತ್ತು ಬದ್ಧತೆಯೊಂದಿಗೆ ಆಕಾಶದಲ್ಲಿ ದೇಶವನ್ನು ಕಾಯುತ್ತಿದ್ದಾರೆ. ನಮ್ಮ ಧೀರ ವಾಯು ಯೋಧರ ಸಾಹಸ, ದೃಢತೆ ಮತ್ತು ಉತ್ಸಾಹವನ್ನು ಪ್ರತಿ ಭಾರತೀಯರು ಗೌರವಿಸುತ್ತಾರೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಟ್ವಿಟ್‌ ಮಾಡಿದ್ದಾರೆ.

ವಾಯುಪಡೆ ಯೋಧರ ಮಾನವೀಯತೆಯ ಸೇವೆ ಅನನ್ಯ: ಮೋದಿ
‘ವಾಯುಪಡೆದ ದಿನ ಕೃತಜ್ಞತೆಯಿಂದ ರಾಷ್ಟ್ರದ ಶೌರ್ಯದ ಸಂಕೇತವಾಗಿರುವ ವಾಯುಪಡೆಯ ಯೋಧರು ಮತ್ತ ಅವರ ಕುಟುಂಬಗಳಿಗೆ ಗೌರವ ಸಲ್ಲಿಸುವೆ. ಆಗಸದಲ್ಲಿದ್ದು ದೇಶ ಕಾಯುವ, ವಿಪತ್ತುಗಳ ಸಂದರ್ಭದಲ್ಲಿ ಮಾನವೀಯತೆಯ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿ ವಾಯುಪಡೆ ಇದೆ. ಇದು ಭಾರತೀಯ ವಾಯುಪಡೆಯ ಹೆಮ್ಮೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್‌ ಮಾಡಿದ್ದಾರೆ.

ಕೇರಳ ನೆನಪಿಟ್ಟುಕೊಳ್ಳುತ್ತದೆ: ಪಿಣರಾಯಿ ವಿಜಯನ್‌

‘ಕೇರಳವು ಭಾರತೀಯ ವಾಯುಪಡೆಯ ಸೇವೆಯನ್ನು ನೆನಪಿಟ್ಟುಕೊಳ್ಳುತ್ತದೆ. ಧನ್ಯವಾದ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಟ್ವೀಟ್‌ ಮಾಡಿ, ರಾಜ್ಯದಲ್ಲಿ ಪ್ರವಾಹ ಸಂದರ್ಭದಲ್ಲಿ ವಾಯುಪಡೆ ಸಲ್ಲಿಸಿದ ಅಪೂರ್ವ ಸೇವೆಯನ್ನು ಸ್ಮರಿಸಿದ್ದಾರೆ.

‘60 ವರ್ಷಗಳ ಪಾಲುದಾರಿಕೆ ಗೌರವಿಸುವೆ’

‘86ನೇ ವಾಯುಪಡೆಯ ದಿನದಂದು ಭಾರತೀಯ ವಾಯುಪಡೆ ಮತ್ತು ‘ಆರ್ಮೆಡೆಲ್ ಏರ್’ ನಡುವೆ 60 ವರ್ಷಗಳ ಸುದೀರ್ಘಕಾಲದ ಕ್ರಿಯಾತ್ಮಕ ಪಾಲುದಾರಿಕೆಯನ್ನು ನಾವು ಗೌರವಿಸುತ್ತೇವೆ’ ಎಂದು ಭಾರತದಲ್ಲಿನ ಫ್ರಾನ್ಸ್‌ ರಾಯಭಾರಿ ಅಲೆಕ್ಸಾಂಡ್ರೆ ಝೈಗ್ಲರ್ಗೆ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.