ನವದೆಹಲಿ : ‘ದೇಶದ ಹಿತರಕ್ಷಣೆಗಾಗಿ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿರುವ ನೌಕಾಪಡೆ ತುಕಡಿ ಯಾವುದೇ ಅಸ್ಥಿರತೆಗೆ ಅವಕಾಶ ನೀಡುವುದಿಲ್ಲ’ ಎಂದು ನೌಕಾಪಡೆ ಮುಖ್ಯಸ್ಥ, ಅಡ್ಮಿರಲ್ ಆರ್.ಹರಿಕುಮಾರ್ ಗುರುವಾರ ಹೇಳಿದರು.
ಎರಡು ಭಿನ್ನ ಕಾರ್ಯಾಚರಣೆಗಳಿಗಾಗಿ ಈಗಾಗಲೇ ಆ ವಲಯದಲ್ಲಿ ನೌಕಾಪಡೆಯ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇಸ್ರೇಲ್–ಹಮಾಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆಂಪು ಸಮುದ್ರದಲ್ಲಿ ಹೌತಿ ಉಗ್ರಗಾಮಿಗಳು ಸರಕು ಸಾಗಣೆ ಹಡಗು ಗುರಿಯಾಗಿಸಿದ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಈ ಮಾತು ಹೇಳಿದರು.
‘ಭಾರತ ಮೂಲದ ಹಡಗು ಗುರಿಯಾಗಿಸಿ ದಾಳಿ ನಡೆದಿಲ್ಲ. ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಕಳೆದ ಬಾರಿ ಹೆಚ್ಚಿನ ದಾಳಿ ನಡೆದಿತ್ತು. ಕೂಡಲೇ ರಕ್ಷಣಾ ಕಾರ್ಯಚರಣೆ ನಡೆದಿದ್ದು, ಸ್ಪಂದಿಸಲಾಗಿದೆ’ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ ಕುರಿತು ಗುರುವಾರ ನಡೆದ ಜಾಗತಿಕ ಶೃಂಗಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಭಾರತದ ಸರಕು ಸಾಗಣೆ ಹಡಗಿನ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.