ನವದೆಹಲಿ: ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯ ಗಡಿ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಮಿಲಿಟರಿ ಕಮಾಂಡರ್‌ಗಳ ಮಟ್ಟದ ಮಾತುಕತೆ ಭಾನುವಾರ ನಡೆಯಿತು.
ಭಾರತದ ಗಡಿಯಲ್ಲಿರುವ ಚುಶೂಲ್ ಠಾಣೆಯಲ್ಲಿ ನಡೆದ 16ನೇ ಸುತ್ತಿನ ಮಾತುಕತೆಯಲ್ಲಿ ಲೆಫ್ಟಿನೆಂಟ್ ಜನರಲ್ ಅನಿಂದ್ಯ ಸೇನ್‌ಗುಪ್ತ ನೇತೃತ್ವದ ಮಿಲಿಟರಿ ಅಧಿಕಾರಿಗಳ ನಿಯೋಗ ಪಾಲ್ಗೊಂಡಿತ್ತು. ಚೀನಾ ಸೇನಾಧಿಕಾರಿಗಳ ನಿಯೋಗದ ನೇತೃತ್ವವನ್ನು ಮೇಜರ್ ಜನರಲ್ ಯಾಂಗ್ ಲಿನ್ ವಹಿಸಿದ್ದರು.
ಸಂಘರ್ಷ ಏರ್ಪಟ್ಟ ಗಡಿ ಠಾಣೆಗಳಿಂದ ಯೋಧರನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು ಎಂಬ ತನ್ನ ವಾದವನ್ನು ಭಾರತ ಪುನರುಚ್ಚರಿಸಿತು ಎಂದು ಮೂಲಗಳು ಹೇಳಿವೆ. ಆದರೆ, ಮಾತುಕತೆ ಕುರಿತಂತೆ ಉಭಯ ದೇಶಗಳಿಂದ ಭಾನುವಾರ ತಡರಾತ್ರಿ ವರೆಗೂ ಅಧಿಕೃತ ಹೇಳಿಕೆ ಬಿಡುಗಡೆಯಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.