ADVERTISEMENT

ಗೋವಾ: ಬೋಟ್‌ನಲ್ಲಿ ಇಂಧನ ಖಾಲಿಯಾಗಿ ಸಮುದ್ರದಲ್ಲಿ ಸಿಲುಕಿದ್ದ 26 ಮಂದಿಯ ರಕ್ಷಣೆ

ಪಿಟಿಐ
Published 20 ಮೇ 2024, 10:23 IST
Last Updated 20 ಮೇ 2024, 10:23 IST
<div class="paragraphs"><p>ಗೋವಾ ಸಮುದ್ರದಲ್ಲಿ ಸಿಲುಕಿದ್ದ ದೋಣಿಯಿಂದ ಪ್ರಯಾಣಿಕರನ್ನು ರಕ್ಷಿಸಿ ಕರೆತಂದ ಭಾರತೀಯ ಕರಾವಳಿ ಕಾವಲು ಪಡೆ</p></div>

ಗೋವಾ ಸಮುದ್ರದಲ್ಲಿ ಸಿಲುಕಿದ್ದ ದೋಣಿಯಿಂದ ಪ್ರಯಾಣಿಕರನ್ನು ರಕ್ಷಿಸಿ ಕರೆತಂದ ಭಾರತೀಯ ಕರಾವಳಿ ಕಾವಲು ಪಡೆ

   

ಪಿಟಿಐ ಚಿತ್ರ

ಪಣಜಿ: ಗೋವಾದ ಮೊರ್ಮುಗಾವ್ ಬಂದರಿನ ಬಳಿ ಪ್ರತಿಕೂಲ ಹವಾಮಾನದಲ್ಲಿ ಸಿಲುಕಿ ಇಂಧನ ಖಾಲಿಯಾದ ಪ್ರವಾಸಿ ಬೋಟ್‌ನಲ್ಲಿ ಸಿಲುಕಿದ್ದ 24 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಯನ್ನು ಭಾರತೀಯ ಕರಾವಳಿ ಕಾವಲು ಪಡೆ ರಕ್ಷಿಸಿದೆ.

ADVERTISEMENT

‘ನೆರುಲ್ ಪ್ಯಾರಡೈಸ್’ ಎಂಬ ಬೋಟ್ ಮೂರು ಮೀಟರ್‌ಗಿಂತಲೂ ಹೆಚ್ಚು ಎತ್ತರದ ಅಲೆಗಳೇಳುವ ಪ್ರದೇಶದಲ್ಲಿ ಭಾನುವಾರ ಇಂಧನ ಖಾಲಿಯಾಗಿ ಸಿಲುಕಿತ್ತು ಎಂದು ಕರಾವಳಿ ಕಾವಲು ಪಡೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಮೊರ್ಮುಗಾವ್ ಬಂದರಿನಿಂದ ಎರಡು ಕಿ.ಮೀ ದೂರದಲ್ಲಿ ಕ್ಯಾಬೊ ಅರಮನೆಯ ಬಳಿ ಬೋಟ್‌ ಸಿಲುಕಿತ್ತು. ಸಿ–148 ಶಿಪ್ ಮೂಲಕ ಬೋಟ್‌ ಸಿಲುಕಿದ್ದ ಜಾಗಕ್ಕೆ ತೆರಳಿದ್ದ ಕರಾವಳಿ ಕಾವಲು ಪಡೆ ಸಿಬ್ಬಂದಿ ಅಲ್ಲಿದ್ದ ಸಿಬ್ಬಂದಿಗೆ ಧೈರ್ಯ ತುಂಬಿ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. 

ನಿತ್ರಾಣರಾಗಿದ್ದ ಪ್ರವಾಸಿಗರು ಮತ್ತು ಬೋಟ್‌ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಐಸಿಜಿ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.