ADVERTISEMENT

ಕಾರವಾರ: ಮೀನುಗಾರಿಕಾ ದೋಣಿಯನ್ನು ರಕ್ಷಿಸಿದ ಕರಾವಳಿ ಪಡೆ

ಪಿಟಿಐ
Published 16 ಏಪ್ರಿಲ್ 2024, 15:29 IST
Last Updated 16 ಏಪ್ರಿಲ್ 2024, 15:29 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ನವದೆಹಲಿ : ಕಾರವಾರದಿಂದ 398 ಕಿಲೋ ಮೀಟರ್‌ ದೂರದಲ್ಲಿ ಸಮುದ್ರ ಮಧ್ಯದಲ್ಲಿ, ಎಂಜಿನ್ ವೈಫಲ್ಯದಿಂದಾಗಿ ಅಪಾಯಕ್ಕಿಡಾಗಿದ್ದ ಮೀನುಗಾರರ ದೋಣಿಯೊಂದನ್ನು ಭಾರತೀಯ ಕರಾವಳಿ ಪಡೆಯು ಮಂಗಳವಾರ ರಕ್ಷಿಸಿದೆ.

‘ಮೀನುಗಾರರ ದೋಣಿ ರೋಸರಿಯಿಂದ ಏಪ್ರಿಲ್ 13ರಂದು ಕರೆ ಬಂದ ಹಿನ್ನೆಲೆ ಕರಾವಳಿ ಪಡೆಯ ಸಾವಿತ್ರಿಬಾಯಿ ಪುಲೆ ಹಡಗು ತಕ್ಷಣ ಸ್ಪಂದಿಸಿ ಕಾರ್ಯಾಚರಣೆ ನಡೆಸಿತು’ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ADVERTISEMENT

‘ಕರಾವಳಿ ಪಡೆಯು ದೋಣಿಯ ಎಂಜಿನ್‌ ಅನ್ನು ಸರಿಪಡಿಸಲು ಯತ್ನಿಸಿ ಬಳಿಕ ಕರಾವಳಿ ಪಡೆಯ ಜಿಲ್ಲಾ ಘಟಕ ಮತ್ತು ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಕಾರವಾರ ಕರಾವಳಿ ತೀರಕ್ಕೆ ದೋಣಿಯನ್ನು ಎಳೆದುತಂದಿತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.